ಪರ್ಕಳ : ಜೂನ್ 27 :ಮಣಿಪಾಲದಿಂದ ಹೆರ್ಗದತ್ತ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ತೋಡಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಪರ್ಕಳ ಕೆನರಾ ಬ್ಯಾಂಕಿನ ಮುಂದೆ ತಿರುವಿನಲ್ಲಿ ಡಾಮರು ರಸ್ತೆಯಲ್ಲಿ ಉಡುಪಿಯಿಂದ ಬೈರಂಜೆ ಹೋಗುವ ಸಿಟಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪಕ್ಕಕ್ಕೆ ಹಿಂದಕ್ಕೆ ಸರಿದು ಬಲಭಾಗಕ್ಕೆ ಚಲಿಸಿ ಮೋರಿ ಬಳಿನಿಂತಿದೆ.
ಕೆಳಪರ್ಕಳದ ಬಳಿ ತೆರಳುತ್ತಿದ್ದಾಗ ಚಾಲಕನ ಮೂರ್ಛೆ ಬಂದಿದ್ದು ಕೂಡಲೇ ಅವರು ಸ್ಟೇರಿಂಗ್ ಬಿಟ್ಟಿದ್ದಾರೆ. ಈ ವೇಳೆ ಬಸ್ ಹಿಮ್ಮುಖವಾಗಿ ಚಲಿಸಿದೆ. ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಕ್ಕೆ ಹಾರಲು ಯತ್ನಿಸಿದ್ದಾರೆ. ಬಸ್ ತೋಡಿಗೆ ಬಿದ್ದು ಅಲ್ಲೇ ನಿಂತಿದೆ.
ಸ್ವಲ್ಪ ಹಿಂದಕ್ಕೆ ತೆರಳುತ್ತಿದ್ದರೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಬಸ್ಸಿನಲ್ಲಿ 30-40 ಮಂದಿ ಪ್ರಯಾಣಿಕರು ಇದ್ದರು. ಚಾಲಕನನ್ನು ಕೂಡಲೇ ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಪ್ರಯಾಣಿಕರಿಗೇನು ತೊಂದರೆ ಆಗಿಲ್ಲ. ಇತ್ತೀಚೆಗೆ ನಗರಸಭೆ ಅಧಿಕಾರಿಗಳು ಇಲ್ಲಿ ರೆಡಿಮೇಡ್ ಸಿಮೆಂಟ್ ವಾಹನದಲ್ಲಿ ಸಿಮೆಂಟ್ ಹೊರ ಚೆಲ್ಲಿದ ಸಿಮೆಂಟನ್ನು ಸ್ವಚ್ಛ ಮಾಡಿಟ್ಟಿದ್ದಾರೆ ಎನ್ನಲಾಗಿದೆ
ಒಟ್ಟಿನಲ್ಲಿ ಇಕ್ಕಟ್ಟಾದ ಕೆಳ ಪರ್ಕಳ ರಸ್ತೆ ಯಾವಾಗ ಅಗಲೀಕರಣವಾಗುತ್ತದೆ ಎಂಬುದು ಸಾರ್ವಜನಿಕರು ಗೊಣಗಾಡುತ್ತಿದ್ದಾರೆ.
ಹಿಂದಕ್ಕೆ ಚಲಿಸಿದ ಬಸ್ಸನ್ನು ಮೇಲಕ್ಕೆತ್ತಲು ಮಣಿಪಾಲ ಪೊಲೀಸರು ಹರಸಹಾಸ ಪಟ್ಟರು . ಸತತ ಒಂದು ಗಂಟೆ ಕಾಲ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ..