ಹೊಸನಗರ:ಜೂನ್ 24: :ಮಳೆಗಾಲದಲ್ಲಿ ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುವುದು ಜಲಪಾತಗಳು ಧುಮ್ಮಿಕ್ಕಿ ಭೋರ್ಗೆರೆಯುವುದು ಸಾಮಾನ್ಯ. ಇಂಥಾ ಸಮಯದಲ್ಲಿ ನೀರಿನ ಜೊತೆ ಹುಚ್ಚಾಟ ಆಡಬೇಡಿ ಎಂದು ಪದೇ ಪದೇ ಮನವಿ ಮಾಡಿದರೂ ಕೂಡಾ ನೀರಿನ ಅಪಾಯ ಮಟ್ಟವನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ ಪ್ರವಾಸಿಗರು
ಶಿವಮೊಗ್ಗ ಜಿಲ್ಲೆಯ ಯಡೂರು ಅಬ್ಬಿಫಾಲ್ಸ್ ನೋಡಲು ಬಂದ ಬೆಂಗಳೂರು ಪ್ರವಾಸಿಗನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದ್ದು ಇಂದು (ಸೋಮವಾರ) ಶವ ಪತ್ತೆಯಾಗಿದೆ.
ಮೃತಪಟ್ಟ ಯುವಕ ಬಳ್ಳಾರಿ ನಿವಾಸಿ ವಿನೋದ್ (26) ಎಂದು ಗುರುತಿಸಲಾಗಿದೆ.
ಈತ ಬೆಂಗಳೂರು ಬಸವನಗುಡಿಯ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದ. ಇವರು 12 ಜನರ ತಂಡದೊಂದಿಗೆ ಆಗಮಿಸಿ, ಕೊಡಚಾದ್ರಿಯಿಂದ ಅಬ್ಬೆ ಫಾಲ್ಸ್ಗೆ ತೆರಳಿದ್ದರು. ಇದೇ ವೇಳೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಫಾಲ್ಸ್ ಬಳಿ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ
ನಾಪತ್ತೆಯಾಗಿರುವ ವಿನೋದನಿಗಾಗಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದರು. ಆದರೆ ಶವ ಪತ್ತೆಯಾಗದ ಕಾರಣ (ಇಂದು) ಸೋಮವಾರ ಬೆಳಿಗ್ಗೆ ಈಶ್ವರ್ ಮಲ್ಪೆ ಮತ್ತು ಅವರ ತಂಡ ಹಾಗೂ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮತ್ತು ಸ್ಥಳೀಯರ ಕಾರ್ಯಾಚರಣೆಯಿಂದ ಮೃತದೇಹವನ್ನು ಪತ್ತೆ ಹಚ್ಚಲಾಯಿತು.
ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಕೊಲ್ಲೂರು ಸಮೀಪ ಅರಶಿಣನಗುಂಡಿ ಫಾಲ್ಸ್ ನಲ್ಲಿ ಜಲಪಾತ ವೀಕ್ಷಿಸುತ್ತಿರುವಾಗ ಜಾರಿಬಿದ್ದು ಭಾರೀ ನೀರಿನ ಹರಿವಿನಿಂದ ಕೊಚ್ಚಿಹೋಗಿ ಇದೇ ರೀತಿಯ ಘಟನೆ ನಡೆದಿತ್ತು. ನೀರುಪಲಾಗಿದ್ದ ಯುವಕನ ಮೃತ ದೇಹ ಒಂದು ವಾರದ ಬಳಿಕ ಸತತ ಕಾರ್ಯಾಚರಣೆಯ ಮೂಲಕ ಪತ್ತೆ ಯಾಗಿತ್ತು..
ಇದೇ ರೀತಿಯ ಘಟನೆ ಮತ್ತೆ ಮರುಕಳಿಸಿದ್ದು ಪ್ರವಾಸಿಗರು ಸೆಲ್ಫೀ ಹಾಗೇ ರೀಲ್ಸ್ ಹುಚ್ಚಾಟ ದಿಂದಾಗಿ ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಳ್ತಾ ಇದ್ದಾರೆ. ಫಾಲ್ಸ್ ಗಳಲ್ಲಿ ಆದಷ್ಟು ಜಾಗಾರುಕಾರಾಗಿ ಇದ್ದಷ್ಟು ಉತ್ತಮ ನದಿಪಾತ್ರಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಳಜಿಯಿಂದ, ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ