ಕಾರ್ಕಳ:ಜೂನ್ 22:ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಕಂಪೆನಿ ಆಶ್ರಯದಲ್ಲಿ ಪರಿಸರ ಬಗ್ಗೆ ಮಾಹಿತಿ ಮತ್ತು ಸಂರಕ್ಷಣಾ ಅಭಿಯಾನದ ಅಂಗವಾಗಿ ಅಲ್ಟ್ರಾಟೆಕ್ ಗ್ರೀನ್ ಕ್ಯಾಂಪ್ ಕಾರ್ಯಕ್ರಮವು ಕಾರ್ಕಳದ ಸಾಲ್ಮರ ವಿನ್ಯಾಸ್ ವಠಾರದಲ್ಲಿ ನಡೆಯಿತು
ಕಾರ್ಕಳದ ಪರಿಸರ ಪ್ರೇಮಿಗಳಿಗೆ ಗಿಡಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಶರೀಫ್, ಕಾರ್ಕಳ ಪುರಸಭೆ ಮಾಜಿ ಸದಸ್ಯ ಹರೀಶ್ ಶೆಣೈ, ಸಮಾಜ ಸೇವಕ ಇಂಜಿನೀಯರ್ ರಾಕೇಶ್ ಶೆಟ್ಟಿ,ಉದ್ಯಮಿಗಳಾದ ನರಸಿಂಹ ಶೆಣೈ, ಶ್ರೀಪತಿ ಶೆಣೈ, ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಕಂಪೆನಿಯ ಮುಖ್ಯಸ್ಥರಾದ ರಕ್ಷಿತ್ ಸುವರ್ಣ ,ಸಂಜೀವ್ ಕುಮಾರ್, ಇರ್ಫಾನ್ ಖಾನ್, ವಿನೀತ್, ವಿನಯ್ ಉಪಸ್ಥಿತರಿದ್ದರು
ಅರುಣ್ ಭಟ್ ಕಾರ್ಕಳ