ಉಡುಪಿ :ಜೂನ್ 21:ಇಂದು ವಿಶ್ವದಾದ್ಯಂತ ಹತ್ತನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗ್ತಾ ಇದೆ. ಉಡುಪಿಯಲ್ಲಿಯೂ ಕೂಡ ಯೋಗ ದಿನಾಚರಣೆ ಹಲವೆಡೆ ಆಚರಿಸಲಾಯಿತು ಈ ಕುರಿತ ವರದಿ ಇಲ್ಲಿದೆ…
ಉಡುಪಿ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು ಸಮಾರಂಭದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಪುತ್ತಿಗೆ ಮಠ, ಉಡುಪಿ ಹಾಗೂ ಪತಂಜಲಿ ಯೋಗ ಪೀಠ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಯೋಗ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಯೋಗದ ಮಹತ್ವದ ಬಗ್ಗೆ ಸಂದೇಶ ನೀಡಿದರು. ಪತಂಜಲಿ ಯೋಗ ಪೀಠ, ಉಡುಪಿ ಇದರ ಸದಸ್ಯರಿಂದ ಯೋಗಾಸನ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು
ಸಮಾರಂಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಶ್ರೀ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ರಾಜ್ಯ ಮಹಿಳಾ ಮೋರ್ಚಾದ ಶಿಲ್ಪಾ ಸುವರ್ಣ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತೆಲಂಗಾಣ ರಾಜ್ಯದ ಪ್ರವಾಸದಲ್ಲಿದ್ದು, ಸಿಕಂದರಾಬಾದ್ ನಲ್ಲಿದ್ದಾರೆ. ಪೂರ್ಣಬೋಧ ವಿದ್ಯಾಪೀಠ ಮಠದಲ್ಲಿ ಯೋಗಾಭ್ಯಾಸವನ್ನ ನಡೆಸಿದರು. ಪ್ರತಿದಿನ ಬೆಳಗ್ಗೆ ವಿವಿಧ ಕಠಿಣ ಯೋಗ ಬಂಗಿಗಳನ್ನ ಅಭ್ಯಾಸ ಮಾಡುವ ಪೇಜಾವರ ಶ್ರೀಗಳು, ನೂರಕ್ಕಿಂತಲೂ ಹೆಚ್ಚಿನ ಆಸನಗಳನ್ನು ಸುಲಲಿತವಾಗಿ ಮಾಡುತ್ತಾರೆ. ಇಂದು ವಿಶ್ವಯೋಗ ದಿನದ ಪ್ರಯುಕ್ತ ಶಿಷ್ಯರ ಜೊತೆ ಪೇಜಾವರ ಸ್ವಾಮೀಜಿ ಯೋಗಾಸನಗಳನ್ನು ಅಭ್ಯಾಸ ಮಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು