ಉಡುಪಿ, ಜೂನ್ .20:ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಜೂನ್ 21ರಂದು ಬೆಳಗ್ಗೆ 10:30ಕ್ಕೆ ಅದರ ಕೋರ್ಟ್ ಹಿಂದಿನ ರಸ್ತೆಯ ಮೆಡಿಕೇರ್ ಸೆಂಟರ್ ಬಿಲ್ಡಿಂಗ್‌ನ 2ನೇ ಮಹಡಿ ಕಚೇರಿಯಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಎಸೆಸೆಲ್ಸಿ, ಪಿಯುಸಿ, ಬಿ.ಕಾಂ ಹಾಗೂ ಇತರೆ ಪದವಿ ವಿದ್ಯಾರ್ಹತೆ ಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸೂಮ್/ಸಿವಿ ಹಾಗೂ ಆಧಾರ್ ಕಾರ್ಡ್‌ಪ್ರತಿಯೊಂದಿಗೆ ನೇರ ಸಂದರ್ಶನ ದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ 8105618291, 9945856670, 9901472710 81057749362 ಸಂಪರ್ಕಿಸಬಹುದು ಎಂದು ಜಿಲ್ಲಾ ಉದೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ