ಉಡುಪಿ : ಜೂನ್ 19 :ದ್ರಶ್ಯ ನ್ಯೂಸ್ :ಪ್ರತಿ ಬುಧವಾರ ಉಡುಪಿಯ ಅದಿಉಡುಪಿ ಸಂತೆ ಮಾರುಕಟ್ಟೆಗೆ ಸುತ್ತಲಿನ ಹಲವು ಹಳ್ಳಿಗಳಿಂದ ರೈತರು ತರಕಾರಿ ಮಾರಾಟಕ್ಕೆ ಬರುತ್ತಾರೆ.
ಕಳೆದ ವಾರಗಳಿಂದ ಮತ್ತೆ ಟೊಮೆಟೋ ಬೆಲೆ ಏರಿಕೆಯಾಗುತ್ತಿದೆ.ಕಳೆದ ವಾರ 58 ರೂಪಾಯಿ ಗೆ ಮಾರಾಟ ಆಗುತ್ತಿದ್ದ ಟೊಮೆಟೊ ಇದೀಗ ಏಕಾಏಕಿ 80 ರ ಗಡಿ ದಾಟಿದೆ
ಕೆಲ ರೈತರು ದಲ್ಲಾಳಿಗಳ ಮೊರೆ ಹೋದರೆ, ಇನ್ನೂ ಕೆಲ ರೈತರು ನೇರವಾಗಿ ಮಾರಾಟ ಮಾಡುತ್ತಾರೆ. ರೈತರ ಬಳಿ ತರಕಾರಿ ದರ ಈವರೆಗೆ ಕಡಿಮೆ ಇತ್ತು. ಇದೀಗ ಅವರೂ ಕೂಡ ಮಾರುಕಟ್ಟೆ ದರದಂತೆ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಟೊಮೆಟೋ ದರ 80 ರೂ. ಗಡಿ ದಾಟಿದ್ದರೆ, ಹೀರೆಕಾಯಿ ಕೆಜಿಗೆ 120 ರೂ., ಸೌತೆಕಾಯಿ 60 ರೂ., ನುಗ್ಗೆಕಾಯಿ 160 ರೂ., ಬೀನ್ಸ್ 160 ರೂ., 6 ನಿಂಬೆ ಹಣ್ಣಿಗೆ 20 ರೂ., ಹೀಗೆ ತರಕಾರಿ ದರ ಹೆಚ್ಚಾಗುತ್ತಲೇ ಇದೆ.
ಮತ್ತೊಂದೆಡೆ ಒಂದು ವಾರದಿಂದ ನಿರಂತರವಾಗಿ ಸುರಿದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ಬಂದ ಬೆಳೆಯೂ ಹಾಳಾಗುತ್ತಿದೆ.
ಹಾಗಾಗಿ ಬೇಡಿಕೆಗೆ ಅನುಗುಣವಾಗಿ ತರಕಾರಿ ದೊರೆಯದ ಕಾರಣ ಬೆಲೆ ಏರಿಕೆಯಾಗಿದೆ ಅನ್ನುತ್ತಾರೆ ವ್ಯಾಪಾರಸ್ಥರು. ವರದಿ : ಮಾಲತಿ ಆಚಾರ್ಯ