ಉಡುಪಿ : ಜೂನ್ 19 : ಮುಂದಿನ ಮೂರು ದಿನಗಳ ಕಾಲ (ಜೂ.20ರಿಂದ 22) ಕರ್ನಾಟಕದ ಪಶ್ಚಿಮದ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿರುವ ಕಾರಣ ಅರಬೀಸಮುದ್ರ ಪ್ರಗ್ಷುಬ್ಧಗೊಳ್ಳಲಿದ್ದು, ಇದರಿಂದ ಮೀನುಗಾರರು ಯಾರೂ ಮೀನುಗಾರಿಕೆಗೆಂದು ಕಡಲಿಗೆ ಹೋಗ ಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅಲ್ಲದೇ ಕರಾವಳಿಯ ಮೂರು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಜೂ.21ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.