ಕಾರ್ಕಳ : ಜೂನ್ 18 :ಕೇಂದ್ರ ಸರಕಾರದ ಅಗ್ನಿ ಪಥ್ ಯೋಜನೆಯಡಿ ಅಗ್ನಿ ವೀರರಾಗಿ ಆಯ್ಕೆಯದ ಪಳ್ಳಿಯ ದುರ್ಗಾ ಪ್ರಸಾದ್ ರನ್ನು ಕಾರ್ಕಳ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ಇಂದು ಗೌರವಿಸಿದೆ
ಇಂದು ಪಳ್ಳಿಯ ದುರ್ಗಾ ಪ್ರಸಾದ್ ರವರ ಮನೆಯಲ್ಲಿ ಬೋಳ ಪ್ರಶಾಂತ್ ಕಾಮತ್ ರವರು ಅವರನ್ನು ಸನ್ಮಾನ ಮಾಡಿದರು.
ದೇಶದ ಭದ್ರತೆಗೆ ಸದೃಢ ಯುವಕರು ಬಹಳ ಪ್ರಾಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ನಾವೆಲ್ಲರೂ ಗೌರವ ಪೂರ್ವಕವಾಗಿ ಹೆಮ್ಮೆ ಪಡಬೇಕು. ಇಂತಹ ದೇಶಭಿಮಾನ ಹೆಚ್ಚಿಸುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರದೀಪ್ ಶೃಂಗಾರ್, ಹರೀಶ್ ಮಧುರ, ಅನಂತ ಕೃಷ್ಣ ಶೆಣೈ , ಉದ್ಯಮಿ ಹರೀಶ್ ಅಮೀನ್, ಅವಿನಾಶ್ ಶೆಟ್ಟಿ ಕುಂಟಲ್ ಪಾಡಿ , ರಮಿತ ಶೈಲೆಂದ್ರ ರಾವ್,ರವಿ ಕುಕ್ಕುದಕಟ್ಟೆ ಪ್ರವೀಣ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು