ಮಂದಾರ್ತಿ :ಜೂನ್ 17: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 7ನೇ ವರ್ಷದ ಮಳೆಗಾಲದ ಸೇವೆ ಆಟ ಜೂ. 18ರಿಂದ ಜರಗಲಿದೆ.
ಸಂಪ್ರದಾಯದಂತೆ ಬೆಳಗ್ಗೆ ಬಾರಾಳಿ ಶ್ರೀ ಗಣಪತಿ ದೇವಾಲಯದಲ್ಲಿ ಗಣಹೋಮವಾಗಿ ಅನಂತರ ಶ್ರೀ ದುರ್ಗಾಪರಮೇಶ್ವರರೀ ದೇಗುಲದಲ್ಲಿ ಗಣಹೋಮ, ಮಹಾಪೂಜೆ ಅನಂತರ ತಾಳ, ಗೆಜ್ಜೆ ನೀಡಿ ಸೇವೆಯಾಟಕ್ಕೆ ಚಾಲನೆ ನೀಡಲಾಗುವುದು
ದೇವಸ್ಥಾನದ ದುರ್ಗಾಪರಮೇಶ್ವರೀ ಕಲ್ಯಾಣ ಮಂದಿರದಲ್ಲಿ ದಿನಂಪ್ರತಿ ಸಂಜೆ 7ರಿಂದ ರಾತ್ರಿ 1ರ ತನಕ ಪ್ರದರ್ಶನ ನಡೆಯಲಿದೆ.ನವೆಂಬರ್ 5ರ ತನಕ ನಡೆಯಲಿದ್ದು, ಸುಮಾರು 145 ದಿನಗಳ ಕಾಲ ದಿನಕ್ಕೆ ಎರಡು ಸೇವೆಯಾಟದಂತೆ ಒಟ್ಟು 290 ಸೇವೆ ಪೂರ್ಣಗೊಳ್ಳಲಿದೆ ಎಂದು ಮೇಳದ ಪ್ರಕಟಣೆ ತಿಳಿಸಿದೆ .