ಉಡುಪಿ: ಉಡುಪಿಯ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ (73) ರವಿವಾರ ಬೆಳಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಹಾಗೂ 2.30ರಿಂದ ಡಾ.ಎ.ರಾಜಾ ಅವರ ಸ್ವಗೃಹ ಮಣಿಪಾಲದ ರಾಜೀವ ನಗರದಲ್ಲಿ ಜೂ.17 ಸೋಮವಾರ ಬೆಳಿಗ್ಗೆ 10.30ವರೆಗೆ ನಡೆಯಲಿದೆ.
ಖ್ಯಾತ, ಹಿರಿಯ ನರರೋಗ ತಜ್ಞ ಹಾಗೂ ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ| ಎ. ರಾಜ ಅವರ ಆಕಸ್ಮಿಕ ಆಗಲುವಿಕೆಯಿಂದ ಸಮಾಜಕ್ಕೆ ಹಾಗೂ ವೈದ್ಯಕೀಯ ಲೋಕಕ್ಕೆ ತೀವ್ರ ನಷ್ಟವಾಗಿದೆ. ಎಂದು ಆಸ್ಪತ್ರೆಯ ಆಡಳಿತ ಹಾಗೂ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ