ಕಾರ್ಕಳ:ಜೂನ್ 15: ಪಂಡಿತರತ್ನ ಎತ್ತೂರು ಶಾಂತಿರಾಜ ಶಾಸ್ತ್ರಿ ಟ್ರಸ್ಟ್ (ರಿ.)ನ ಆಶ್ರಯದಲ್ಲಿ ಇರ್ವತ್ತೂರಿನ ಭಗವಾನ್ ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಟ್ರಸ್ಟಿನ ವತಿಯಿಂದ “ಗ್ರಂಥ ಭಂಡಾರ ಸ್ಥಾಪನಾ” ಕಾರ್ಯಕ್ರಮ ಶ್ರೀ ಜೈನಮಠ, ದಾನಶಾಲೆ, ಕಾರ್ಕಳ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂಶ್ರೀ ಜೈನಮಠ, ಮೂಡುಬಿದಿರೆ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಯವರು ದಿವ್ಯ ಉಪಸ್ಥಿತಿಯಲ್ಲಿ ಜಂಟಿಯಾಗಿ ಉದ್ಘಾಟಿಸಿ ಆಶೀರ್ವಚನ ನೀಡಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಕೆ . ಅಭಯಚಂದ್ರ ಜೈನ್ಪದ್ಮಗಂಧಿಯವರು ಉಪಸ್ಥಿತರಿದ್ದರು
ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ (ರಿ.), ಕೊಳಕ್ಕೆ ಇರ್ವತ್ತೂರು ಇದರ ಅಧ್ಯಕ್ಷರಾದ ಕೆ. ಗುಣಪಾಲ ಕಡಂಬ ಅಧ್ಯಕ್ಷತೆಯನ್ನು ವಹಿಸಿದ್ದರು
ಎಡ್ತೂರು ಶಾಂತಿರಾಜ ಶಾಸ್ತ್ರಿ ಚಾರಿಟೇಬಲ್ ಟ್ರಸ್ಟ್(ರಿ.)ದ ಅಧ್ಯಕ್ಷ ಜಿತೇಂದ್ರ ಕುಮಾರ್ ಬೆಂಗಳೂರವರು ಪ್ರಸ್ತಾವನೆಗೈದರು
ಭರತ ಇಂದ್ರರವರು ಪ್ರಾರ್ಥಿಸಿ ಉದಯ ಕುಮಾರ್ ಇರ್ವತ್ತೂರು ಸ್ವಾಗತಿಸಿದರು ಸಭೆಯಲ್ಲಿ ಸಮಿತಿಯ ಕೋಶಾಧಿಕಾರಿ ಭರತ್ ಕುಮಾರ್ ಜೈನ್ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಸ್ಥಿತರಿದರು.