ಕಾರ್ಕಳ:ಜೂನ್ 14: 15 ವರ್ಷಗಳಿಂದ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿ ಆಗಿಲ್ಲ, ಕನ್ನಡ ಮಾಧ್ಯಮ ಶಾಲೆಗಳ ಉಳಿಸುವಂತೆ ಕರೆ ನೀಡುವ ಸರಕಾರಗಳು ಬೇಕಾಬಿಟ್ಟಿ ಹೊಸ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪರವಾನಿಗೆ ನೀಡುತ್ತಿರುವುದು ಬೇಸರದ ಸಂಗತಿ ಎಂದು ಕಾರ್ಕಳ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮಾಜಿ ಪುರಸಭಾ ಅಧ್ಯಕ್ಷ ಕೆ.ಪಿ ಶೆಣೈ ತಿಳಿಸಿದರು
ಅವರು ಕಾರ್ಕಳ ಎಸ್ ವಿ ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಶ್ರೀಮತಿ ಕುಂಬಳೆ ಯಮುನಾ ಭಾಯಿ ಮಂಜುನಾಥ ಭಕ್ತ ವೇದಿಕೆಯಲ್ಲಿ ಬೋಳ ಸುರೇಂದ್ರ ಕಾಮತ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಕಾರ್ಕಳ ಟೈಗರ್ಸ್, ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಕೊಡೆ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು
ಸ್ವಸ್ಥ ವಿದ್ಯಾವಂತ ಆರೋಗ್ಯವಂತ ಸಮಾಜ ನಮ್ಮ ಗುರಿ : ಬೋಳ ದಾಮೋದರ್ ಕಾಮತ್
ಸ್ವಸ್ಥ ವಿದ್ಯಾವಂತ ಆರೋಗ್ಯವಂತ ಸಮಾಜ ನಮ್ಮ ಗುರಿಯಾಗಿದೆ ಆ ನಿಟ್ಟಿನಲ್ಲಿ ಕಾರ್ಕಳ ಹಲವಾರು ಜನಪಯೋಗಿ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ ಶಾಲಾ ಕಾಲೇಜುಗಳಿಗೆ ಪುಸ್ತಕ ವಿತರಣೆ , ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ, ಸರಕಾರಿ ಆರೋಗ್ಯ ಕೇಂದ್ರಗಳಿಗೆ ಸವಲತ್ತುಗಳ ವ್ಯವಸ್ಥೆಗಳನ್ನು ನಮ್ಮ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ ಎಂದು ಬೋಳ ಸುರೇಂದ್ರ ಕಾಮತ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬೋಳ ದಾಮೋದರ್ ಕಾಮತ್ ಮಾಹಿತಿ ನೀಡಿದರು ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿ ದಾಮೋದರ್ ಕಾಮತ್ ಅವರ ಸೇವೆಯನ್ನು ಶ್ಲಾಘಿಸಿ ಶುಭಾಶಂಸನೆಗೈದರು
ಅಜೆಕಾರು ಪದ್ಮಗೋಪಾಲ್ ಚಾರಿಟಬಲ್ ಟ್ರಸ್ಟ್ ಹಾಗೂ ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕಾರ್ಕಳ ಟೈಗರ್ಸ್ ಸಂಸ್ಥಾಪಕ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅವಿನಾಶ್ ಜಿ ಶೆಟ್ಟಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಉದ್ಯಮಿ ಜಯವಂತ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ 60 ಶಾಲೆಗಳ 2500 ವಿದ್ಯಾರ್ಥಿಗಳು ಕಾರ್ಕಳದ ವಿಶೇಷ ಶಾಲೆಗಳ ವಿಕಲಚೇತನ ವಿದ್ಯಾರ್ಥಿಗಳಿಗೆ ಸುಮಾರು 22ಲಕ್ಷ ರೂಪಾಯಿ ಮೌಲ್ಯದ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು