ಪರ್ಕಳ : ಜೂನ್ 12: ಪರ್ಕಳ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣ ಹಂತದಲ್ಲಿರುವ ಕೆರೆ ಈಗ ಮತ್ತೆ ಕುಸಿದಿದೆ.
ಮುಂಗಾರು ಮಳೆ ಆರಂಭದಲ್ಲಿ ಈಕೆರೆ ಈಗ ನಾಲ್ಕನೇ ಬಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ
ಈಗಾಗಲೇ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕೆಲಸ ಪೂರ್ಣಗೊಳ್ಳಲು ಪದೇ ಪದೇ ತಡೆಯಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ..
ಕೆರೆಯ ಪಕ್ಕದಲ್ಲಿ ನೂತನವಾಗಿ ರಸ್ತೆ ನಿರ್ಮಾಣ ಮಾಡಿ ಪಕ್ಕದಲ್ಲಿ ಮಳೆ ನೀರು ಹರಿಯಲು ತೋಡು ಮಾಡದೆ ಇರುವುದು ಒಂದು ಕಾರಣವಾಗಿದೆ ಜೊತೆಗೆ ಕೆರೆಯ ಸುತ್ತಮುತ್ತ ಮಣ್ಣು ಅಗೆದದ್ರಿಂದ ಮತ್ತೆ ಕಾಮಗಾರಿಗೆ ತೊಡಕಾಗಿದೆ. ಕಾಮಗಾರಿಯೂ ಕೂಡ ಗುಣಮಟ್ಟ ಹೊಂದಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ