ಉಡುಪಿ :ಜೂನ್ 10 :ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ಇದೇ ತಿಂಗಳ ತಾರೀಕು 11 ಮಂಗಳವಾರ ಅಂದರೆ ನಾಳೆ ತನು ತರ್ಪಣ ಮಂಡಲ ಸೇವೆ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಆ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಿಗ್ಗೆ ಮಂಡಲ ರಚನೆ ಆರಂಭಗೊಳ್ಳಲಿದ್ದು ನಾಗ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶ ಅಭಿಷೇಕ ಪವಮಾನ ಸೂಕ್ತ ಯಾಗ ಕಲಶಾಭಿಷೇಕ ನೆರವೇರಲಿದೆ..
ಸಂಜೆ ಗಂಟೆ 5 ರಿಂದ ದೇವತಾ ಪ್ರಾರ್ಥನೆಯೊಂದಿಗೆ ನಾಗ ಸಾನಿಧ್ಯದಲ್ಲಿ ಹಾಲಿಟ್ಟು ಸೇವೆಯೊಂದಿಗೆ ನಾಗ ತನು ತರ್ಪಣ ಮಂಡಲ ಸೇವೆ ಆರಂಭಗೊಳ್ಳಲಿದೆ..
ಕಲ್ಲಂಗಳ ರಾಮಚಂದ್ರ ಕುಂಚಿತ್ತಾಯ ಅವರಿಂದ ನಾಗ ಸಂದರ್ಶನವೂ ನೆರವೇರಲಿದೆ..
ಈ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ ಆರಾಧನೆ ದಂಪತಿ ಆಚಾರ್ಯ ಕನ್ನಿಕಾ ಪೂಜೆಗಳು ನೆರವೇರಲಿದ್ದು ಮಧ್ಯಾಹ್ನ ಹಾಗೂ ರಾತ್ರಿ ಮಹಾಪ್ರಸಾದವಾಗಿ ಅನ್ನ ಸಂತರ್ಪಣೆ ನೆರವೇರಲಿದೆ..
ಈ ಕ್ಷೇತ್ರದಲ್ಲಿ ಈ ಸೇವೆಯು ನಾಗದೋಷ ಪರಿಹಾರಾರ್ಥವಾಗಿ ಕ್ಷೇತ್ರದ ನಾಗದೇವರಿಂದ ಅನುಗ್ರಹಿತಗೊಂಡ ಭಕ್ತರೊರ್ವರಿಂದ ಸೇವಾ ರೂಪವಾಗಿ ಸಮರ್ಪಿತವಾಗಲಿದೆ
ಷಟ್ ಶಿರಾ ಸುಬ್ರಮಣ್ಯ ಸ್ವಾಮಿ ವರ್ಧಂತಿ ಮಹೋತ್ಸವ
ಕ್ಷೇತ್ರದ ನಾಗಾಲ್ಯಾದಲ್ಲಿರುವ ವಲ್ಲಿ ದೇವಯಾನಿ ಸಹಿತವಾಗಿ ಆರೂಢನಾಗಿರುವ ಷಟ್ ಶಿರ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿಷ್ಠ ವರ್ಧಂತಿ ಮಹೋತ್ಸವವು ಇದೇ ತಿಂಗಳ ತಾರೀಕು ಹನ್ನೊಂದರ ಮಂಗಳವಾರದಂದು ನೆರವೇರಲಿದೆ..
ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹೇರೂರು ವೇದಮೂರ್ತಿ ಆನಂದ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ಸಂಪನ್ನಗೊಳ್ಳಲಿವೆ..
ಪಂಚ ವಿಂಸತಿ ಕಲಶಾರಾಧನೆ ಪ್ರಧಾನ ಹೋಮ ಕಳಶಾಭಿಷೇಕ ಶ್ರೀ ಸುಬ್ರಮಣ್ಯ ಸಹಸ್ರನಾಮ ಪಾಯಸ ಹೋಮ ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ
ಹಾಗೂ ಬ್ರಾಹ್ಮಣರಾಧನೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ತಳಿಸಿರುತ್ತಾರೆ