ತೆಕ್ಕಟ್ಟೆ: ಜೂನ್ 09:ಧಾರಾಕಾರ ಮಳೆಯಿಂದಾಗಿ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ ಮತ್ಯಾಡಿ (ಗುಡ್ಡೆಅಂಗಡಿ) ಹಿ.ಪ್ರಾ. ಶಾಲೆ ಎದುರು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಚಲಿಸುತ್ತಿದ್ದ ಅಟೋ ರಿಕ್ಷಾದ ಮೇಲೆ ಮರ ಉರುಳಿದೆ. ರಿಕ್ಷಾ ಜಖಂಗೊಂಡಿದೆ
ರಿಕ್ಷಾವು ಪ್ರಯಾಣಿಕರನ್ನು ಗುಡ್ಡಟ್ಟು ದೇಗುಲಕ್ಕೆ ಬಿಟ್ಟು ಕುಂದಾಪುರದ ಕಡೆಗೆ ಮರಳುತ್ತಿತ್ತು. ರಿಕ್ಷಾದ ಮುಂಭಾಗದ ಗಾಜು ಒಡೆದಿದೆ. ಚಾಲಕ ಶಂಕರ ಪೂಜಾರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಲ್ಪ ಕಾಲ ವಾಹನಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊಂಬಾಡಿ ಮಂಡಾಡಿ ಗ್ರಾ.ಪಂ. ಉಪಾಧ್ಯಕ್ಷ ಬಿ. ಅರುಣ್ ಕುಮಾರ್ ಹೆಗ್ಡೆ, ಗ್ರಾ.ಪಂ. ಸದಸ್ಯ ದಿನೇಶ್ ಮೊಗವೀರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಲಾಯಿತು.