ಕಾರ್ಕಳ:ಜೂನ್ 09:ಮುನಿಯಾಲು ಉದಯ ಶೆಟ್ಟಿ ಅಭಿಮಾನಿ ಬಳಗ, ಬ್ಲಾಕ್ ಕಾಂಗ್ರೆಸ್ ಕಾರ್ಕಳ-ಹೆಬ್ರಿ ಮತ್ತು ಡಾ.ಟಿಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳ ಆಶ್ರಯದಲ್ಲಿ ಉದಯ ಶೆಟ್ಟಿ ಮುನಿಯಾಲು ಅವರ ಹುಟ್ಟುಹಬ್ಬದ ಪ್ರಯುಕ್ತ ಮಂಜುನಾಥ ಫೈ ಸಭಾಂಗಣದಲ್ಲಿ ಶನಿವಾರ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಹೃದಯ ರೋಗ, ಸಾಮಾನ್ಯ ಆರೋಗ್ಯ ಮತ್ತು ಕಣ್ಣಿನ ಪಾಸಣಾ ಶಿಬಿರದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ತಾಲೂಕಿನ 100ಕ್ಕೂ ಮಿಕ್ಕಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರಿಗೆ ಅಭಿನಂದನೆ, ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಸಾಧಿಸಿದ 15 ಸರಕಾರಿ ಶಾಲೆಗಳಿಗೆ ಪ್ರೋತ್ಸಾಹಧನ, ಹೊನ್ನಮ್ಮ ಮತ್ತು ವನಿತಾ ಎಂಬವರಿಗೆ ವೈದ್ಯಕೀಯ ನೆರವು ನೆರವೇರಿತು. ಈ ಸಂದರ್ಭ 100ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ ಉದ್ಘಾಟಿಸಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಕಾಂಗ್ರೆಸ್ ಪ್ರಮುಖ ನಾಯಕರಾದ ನೀರೆ ಕೃಷ್ಣ ಶೆಟ್ಟಿ, ಇತರರು ಭಾಗವಹಿಸಿದ್ದರು