ಕಾರ್ಕಳ :ಜೂನ್ 05:ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 05-06-2024 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕಾರ್ಕಳ ಗೌರಿ ನರ್ಸರಿಯ ಆದಿತ್ಯ ಕುಡ್ವ ಅವರ ಪ್ರಾಯೋಜಕತ್ವದ ವಿವಿಧ ಹಣ್ಣಿನ ಹಾಗೂ ಹೂವಿನ ಸಸ್ಯಗಳನ್ನು ಸ್ಕೌಟ್ ಅಂಡ್ ಗೈಡ್ ಮಕ್ಕಳಿಗೆ ನೀಡುವ ಮುಖೇನ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಜಿಲ್ಲಾ ಸಹಾಯಕ ಗೈಡ್ ಆಯುಕ್ತರು ಆದಂತಹ ಶ್ರೀಮತಿ ವಿದ್ಯಾ ವಿ ಕಿಣಿಯವರು ಮಕ್ಕಳಿಗೆ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು . ಗೈಡರ್ ಸೀಮಾ ಕಾಮತ್ ಅವರು ಮಕ್ಕಳಿಗೆ ಮಾರ್ಗದರ್ಶನವಿತ್ತರು.
ಸ್ಕೌಟರ್ ಸುಜಾತ ಹೆಗ್ಡೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದಂತಹ ಶ್ರೀಮತಿ ಗಾಯತ್ರಿ ಕಿಣಿ ,ಶ್ರೀಮತಿ ರಾಧಿಕಾ ಶೆಣೈ, ಪುಷ್ಪ, ಅರ್ಚನಾ ಕಿಣಿ ಹಾಗೂ ಶ್ರೀಮತಿ ಶುಭಲಕ್ಷ್ಮಿ ಇವರು ಉಪಸ್ಥಿತರಿದ್ದರು .
ಮಕ್ಕಳು ಪರಿಸರ ದಿನಾಚರಣೆಗೆ ಸಂಬಂಧಪಟ್ಟ ವಿವಿಧ ಭಿತ್ತಿ ಪತ್ರ ಹಾಗೂ ಫಲಕಗಳನ್ನು ತಯಾರಿಸಿ ಪರಿಸರ ದಿನಾಚರಣೆಯ ಮಹತ್ವವನ್ನು ಸಾರಿದರು. ಗಿಡಗಳಿಗೆ ಸಂಭಂದಿಸಿದ ಸ್ವರಚಿತ ಹಾಡನ್ನು ಹಾಡಿದರು.