ಉಡುಪಿ, ಜೂ.4: ಕೊಂಕಣ ರೈಲ್ವೆಯ ಮಡಗಾಂವ್- ಅಂಕೋಲ ನಡುವೆ ಜೂ.6ರಂದು ಸುಮಾರು ಎರಡೂವರೆ ಗಂಟೆಗಳ ಕಾಲ ಹಳಿ ನಿರ್ವಹಣೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಜೂ.6ರಂದು ಸಂಚರಿಸುವ ರೈಲು ನಂ.06602 ಮಂಗಳೂರು ಸೆಂಟ್ರಲ್- ಮಡಗಾಂವ್ ಸ್ಪೆಷನ್ ರೈಲಿನ ಸಂಚಾರವನ್ನು ಅಂಕೋಲದಲ್ಲೇ ಕೊನೆಗೊಳಿಸಲಾಗುವುದು. ಇದರಿಂದ ಅಂದು ಅಂಕೋಲ ಹಾಗೂ ಮಡಗಾಂವ್ ನಡುವಿನ ಸಂಚಾರ ರದ್ದುಗೊಳ್ಳಲಿದೆ.
ಅದೇ ರೀತಿ ಜೂ.6ರ ರೈಲು ನಂ.06601 ಮಡಗಾಂವ್- ಮಂಗಳೂರು ಸೆಂಟ್ರಲ್ ಸ್ಪೆಷಲ್ ರೈಲಿನ ಸಂಚಾರ ನಿಗದಿತ ಸಮಯಕ್ಕೆ ಸರಿಯಾಗಿ ಅಂಕೋಲದಿಂದ ಪ್ರಾರಂಭಗೊಳ್ಳಲಿದ್ದು, ಆ ದಿನ ಮಡಗಾಂವ್- ಅಂಕೋಲ ನಡುವೆ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.