ಉಡುಪಿ : 01ಜೂನ್ :ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ರಜತ ಸಂಭ್ರಮದ 24ನೇ ಕಾರ್ಯಕ್ರಮದ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘ ಹಾಗೂ ರೋಟರಿ ಐಸಿರಿ ಪರ್ಕಳ ಸಹಯೋಗ ದೊಂದಿಗೆ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಎರಡು ದಿನಗಳ ಕೃಷಿ ಸಮ್ಮೇಳನದ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀಪಾದರು ನೆರವೇರಿಸಿದರು…..
ಮೇಳದಲ್ಲಿ ಸುಮಾರು 100ಕ್ಕಿಂತಲೂ ಅಧಿಕ ಕೃಷಿ ಮಳಿಗೆಗಳಿದ್ದು, ಅದರಲ್ಲಿ ಕೃಷಿ ಬೀಜ, ಗೃಹೋತ್ಪನ್ನ, ಔಷಧಿ ವಸ್ತುಗಳು, ಯಂತ್ರಗಳು, ನರ್ಸರಿ ಗಿಡಗಳು, ಸಾವಯವ ಗೊಬ್ಬರ, ಕೃಷಿ ವಸ್ತುಗಳಿಂದ ತಯಾರಿಸಿದ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ.