ಮಣಿಪಾಲ, ಮೇ 31, 2024 – ವಿಶ್ವ ರಕ್ತದಾನಿಗಳ ದಿನ (WBDD) 2024ರ ಪ್ರಯುಕ್ತ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ (ಡ್ರಾಯಿಂಗ್ ಮತ್ತು ಪೈಂಟಿಂಗ್) ಸ್ಪರ್ಧೆಯನ್ನು ಏರ್ಪಡಿಸಿದೆ.
ಸ್ಪರ್ಧೆಯು ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ:
- 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ
- 6 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ
- ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ
ಭಾಗವಹಿಸುವವರು ತಮ್ಮ ಕಲಾಕೃತಿಯನ್ನು 60 ಸೆಂ 45 ಸೆಂ ಡ್ರಾಯಿಂಗ್ ಶೀಟ್‌ನಲ್ಲಿ ರಚಿಸಬೇಕಾಗುತ್ತದೆ. ಡ್ರಾಯಿಂಗ್/ಪೇಂಟಿಂಗ್ ಅನ್ನು ಶಾಲಾ/ಕಾಲೇಜುಗಳ ಪ್ರಾಂಶುಪಾಲರು ಅಥವಾ ಮುಖ್ಯ ಶಿಕ್ಷಕರ ಮುದ್ರೆ ಮತ್ತು ಸಹಿಯೊಂದಿಗೆ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರ, ನೆಲಮಾಳಿಗೆ, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ – 576104 ಈ ವಿಳಾಸಕ್ಕೆ ಹೆಸರು, ತರಗತಿ, ಶಾಲೆಯ ಹೆಸರು , ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ ಕಳುಹಿಸಬೇಕು. ತಮ್ಮ ಚಿತ್ರಕಲೆ ಸಲ್ಲಿಕೆಗಳಿಗೆ ಕೊನೆಯ ದಿನಾಂಕ ಜೂನ್ 10, 2024 ಆಗಿದೆ.
ಪ್ರತೀ ವಿಭಾಗದ ವಿಜೇತರು ಪ್ರಮಾಣಪತ್ರಗಳೊಂದಿಗೆ ಆಕರ್ಷಕ ಬಹುಮಾನಗಳನ್ನು ಪಡೆಯಲಿದ್ದಾರೆ ಮತ್ತು ಎಲ್ಲಾ ಭಾಗವಹಿಸುವವರು ಇ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ. ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಮಾತ್ರವಲ್ಲದೆ ರಕ್ತದಾನದ ಪ್ರಮುಖ ಕಾರ್ಯವನ್ನು ಉತ್ತೇಜಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ನಿಯಮಗಳಿಗಾಗಿ ಈ ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 0820 2922331 ಮತ್ತು 2922254 ಅನ್ನು ಸಂಪರ್ಕಿಸಬಹುದು