ಕಾರ್ಕಳ :ಮೇ 30:ತಾಲೂಕಿನ ಹಾಳೆಕಟ್ಟೆ ಕಲ್ಯಾ ಮಲಯ್ಯಬೆಟ್ಟು ಎಂಬಲ್ಲಿ ಚಿರತೆ ಒಂದು ಹಾಡುಹಗಲೇ ಕಾಣಿಸಿಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಅರಣ್ಯ ಇಲಾಖೆ ಎಚ್ಚತ್ತುಕೊಂಡು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಮಲ್ಲಾಯಬೆಟ್ಟು ಎಂಬಲ್ಲಿ ಚಿರತೆ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಎಂದು ಹೇಳಲಾಗಿದ್ದು ಇದೀಗ ಹಗಲಿನ ವೇಳೆ ಚಿರತೆ ಸಂಚಾರದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ