ಕಾಪು:ಮೇ 30: ಪಾದೂರು ಐ.ಎಸ್.ಪಿ.ಆರ್.ಎಲ್ ಕಂಪೆನಿ ಬಳಿಯ ಮರದ ಪುಡಿ ದಾಸ್ತಾನು ಘಟಕಕ್ಕೆ ಬೆಂಕಿ ಬಿದ್ದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಮರದ ಪುಡಿ ಹಾಗೂ ಭತ್ತದ ಉಮಿಯನ್ನು ಸಂಗ್ರಹಿಸಿಡುತ್ತಿದ್ದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರ್ಮಿಕರು ತತ್ ಕ್ಷಣ ಗಮನಿಸಿದ್ದರು.
ಕೂಡಲೇ ಐ.ಎಸ್.ಪಿ.ಆರ್.ಎಲ್ ಮತ್ತು ಉಡುಪಿ ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಿದ್ದು ಯಾವುದೇ ಅಪಾಯಗಳುಂಟಾಗಿಲ್ಲ.
ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ