ನವದೆಹಲಿ:ಮೇ 28: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಶುಕ್ರವಾರ ಮಾನವ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಠಿಣ ಎಚ್ಚರಿಕೆ ನೀಡಿದ್ದು, ದೇಶದಲ್ಲಿ ತಾಯಿಯ ಹಾಲಿನ ವಾಣಿಜ್ಯೀಕರಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.
ಈ ಕಛೇರಿಯು ಅಂದರೆ ಎಫ್‌ಎಸ್‌ಎಸ್‌ಐ ತಾಯಿ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣದ ಕುರಿತು ವಿವಿಧ ನೋಂದಾಯಿತ ಘಟಕಗಳಿಂದ ಪ್ರಾತಿನಿಧ್ಯವನ್ನು ಸ್ವೀಕರಿಸುತ್ತದೆ. ಈ ನಿಟ್ಟಿನಲ್ಲಿ, ಎಫ್‌ಎಸ್‌ಎಸ್ ಕಾಯಿದೆಯ 2006ರ ನಿಯಮಗಳ ಪ್ರಕಾರ ತಾಯಿ ಹಾಲನ್ನು ಸಂಸ್ಕರಿಸಲು ಮತ್ತು / ಅಥವಾ ಮಾರಾಟ ಮಾಡಲು ಎಫ್‌ಎಸ್‌ಎಸ್‌ಎಐ ಅನುಮತಿ ನೀಡಿಲ್ಲ ಎಂದು ಸಂಸ್ಥೆ ಹೇಳಲು ಬಯಸುತ್ತದೆ ಎಂದು ಎಫ್‌ಎಸ್‌ಎಸ್‌ಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ತಾಯಿ ಹಾಲು ಹಾಗೂ ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಫ್‌ಎಸ್‌ಎಸ್‌ಐ ಹೇಳಿದೆ.
ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿ ತಾಯಿ ಹಾಲಿನ ಮಾರಾಟ ಸೇರಿದಂತೆ ವಾಣಿಜ್ಯೀಕರಣಕ್ಕೆ ಕ್ರಮ ಕೈಗೊಂಡಲ್ಲಿ, ಅಂತಹ ಆಹಾರ ವ್ಯಾಪಾರ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ನಿಯಂತ್ರಣ ಸಂಸ್ಥೆ ಹೇಳಿದೆ. ಜೊತೆಗೆ ಮಾನವ ತಾಯಿ ಹಾಲು ಮಾರಾಟದಲ್ಲಿ ತೊಡಗಿರುವ ಅಂತಹ ವ್ಯಾಪಾರ ಘಟಕಗಳಿಗೆ ಅನುಮೋದನೆ ನೀಡದಂತೆ, ಆಹಾರ ಸಂಸ್ಥೆಗಳಿಗೆ ಲೈಸೆನ್ಸ್ ನೀಡುವ ಅಧಿಕಾರಿಗಳಿಗೆ ಸೂಚಿಸಿದೆ. ತಾಯಿಯ ಹಾಲು/ಮಾನವ ಹಾಲಿನ ಸಂಸ್ಕರಣೆ ಅಥವಾ ಮಾರಾಟದಲ್ಲಿ ತೊಡಗಿರುವ ಅಂತಹ ಯಾವುದೇ ಸಂಸ್ಥೆಗೆ ಪರವಾನಗಿ ನೋಂದಣಿ ನೀಡಿಲ್ಲ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಪರವಾನಗಿ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಎಫ್‌ಎಸ್‌ಎಸ್‌ಎಐ ಸೂಚಿಸಿದೆ
ಮಾರಾಟಕ್ಕಿಲ್ಲ ಆದರೆ ದಾನ ಮಾಡಬಹುದೇ?
ರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ, ದಾನಿ ತಾಯಿ ಹಾಗೂ ಅಥವಾ ಮಾನವ ಹಾಲನ್ನು(DHM) ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವಂತಿಲ್ಲ, ಇದನ್ನು ನವಜಾತ ಶಿಶುಗಳಿಗೆ ಸಮಗ್ರ ಹಾಲುಣಿಸುವ ನಿರ್ವಹಣಾ ಕೇಂದ್ರಗಳಿಗೆ ದಾಖಲಾದ ಮಕ್ಕಳಿಗೆ ಮಾತ್ರ ದಾನವಾಗಿ ನೀಡಬಹುದು. ಯಾವುದೇ ಹಣಕಾಸಿನ ಲಾಭವಿಲ್ಲದೆ ಮುಕ್ತವಾಗಿ ಮತ್ತು ಸ್ವಯಂಪ್ರೇರಣೆಯಿಂದ ದಾನ ಮಾಡಬೇಕು. ದಾನ ಮಾಡಿದ ಹಾಲನ್ನು ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಮತ್ತು ಇತರ ತಾಯಂದಿರ ಶಿಶುಗಳಿಗೆ ಆಹಾರಕ್ಕಾಗಿ ಉಚಿತವಾಗಿ ಬಳಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ನಿಯಮಗಳು ಹೇಳುತ್ತವೆ.