ಉಡುಪಿ :ಮೇ 27 : ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಮಹಾ ರಂಗ ಪೂಜಾ ಮಹೋತ್ಸವ ಸಹಿತ ಬಲಿ ಉತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಹೇರೂರು ಆನಂದ ಭಟ್ ಹಾಗೂ ಗಣೇಶ ಸರಳಯ ಅವರ ನೇತೃತ್ವದಲ್ಲಿ ನೆರವೇರಿತು.
ಸಂಜೆ ಆರಂಭಗೊಂಡ ಮಹಾ ರಂಗಪೂಜೆಯನ್ನು ವೇದಮೂರ್ತಿ ಹೇರೂರು ಆನಂದ ಭಟ್ ನೆರವೇರಿಸಿದರು
ವೇದಮೂರ್ತಿ ಕೊಲಕಾಡಿ ವಾರ್ದಿರಾಜ ಉಪಾಧ್ಯಾಯ ದೇವಿಯ ಧ್ಯಾನವನ್ನು ಆಕೆಯ ಮಹಿಮೆಯನ್ನು ಭಕ್ತ ಸಮೂಹದ ಮನಮುಟ್ಟುವಂತೆ ಉಲಿದರು.. ಹಾಗೂ ಬಲಿ ಉತ್ಸವವನ್ನು ನೆರವೇರಿಸಿದರು..
ಬಲಿ ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ಕುಮಾರಿ ಸ್ವಾತಿ ಆಚಾರ್ಯ ಯಕ್ಷ ಸುತ್ತನ್ನು ಶ್ರೀಮತಿ ಉಪ್ಪುರು ಭಾಗ್ಯಲಕ್ಷ್ಮಿ ಚೆಂಡ ಸುತ್ತು ಬೆಲ್ಕಳೆ ಚಂಡೆ ಬಳಗದವರಿಂದ ವಿಜಯ ದೇವಾಡಿಗ ಅವರಿಂದ ಶೃಂಗಾರವಾದ್ಯ ಸುತ್ತು
ಮುರಳಿದರ ಮುದ್ರಾಡಿ ಮತ್ತು ಬಳಗದವರಿಂದ ನಾದಸ್ವರ ವಾದನ ಸುತ್ತು ಹಾಗೂ ಪಂಚವಾದ್ಯ ಸುತ್ತು ವಿಶೇಷ ಆಕರ್ಷಣೆಯಾಗಿ ಮೂಡಿ ಬಂತು.
ಪಲ್ಲಕ್ಕಿ ಸುತ್ತನ್ನು ವನದುರ್ಗ ಬಳಗ ಬೆಳ್ಮಣ್ಣು ಹಾಗೂ ಭಜನೆ ಸುತ್ತನ್ನು ನೆರವೇರಿಸಿದರು
ನಂತರ ನೆರವೇರಿದ ವಸಂತ ಪೂಜೆಯಲ್ಲಿ ಕೊಲಕಾಡಿ ವೇದಮೂರ್ತಿ ಶ್ರೀವತ್ಸ ಉಪಾಧ್ಯಾಯ, ಕನ್ನರ್ಪಾಡಿ ಕೃಷ್ಣರಾಜ, ವೇದಮೂರ್ತಿ ವಾಮನ ಆಚಾರ್ಯ, ಶ್ರೀ ನಾಗಶಯನ, ಹೇರ್ಗ ಗಣೇಶ್ ಭಟ್, ಸ್ವಸ್ತಿಕಾಚಾರ್ಯ, ಇವರ ಸಹಯೋಗದೊಂದಿಗೆ ಚತುರ್ವೇದ ಸಹಿತ ವಿವಿಧ ಸ್ತುತಿಗಳಿಂದ ದೇವಿಯನ್ನು ಸಂಪ್ರೀತಿಗೊಳಿಸಿದರು.. ವಿವಿಧ ಕುಸುಮಗಳಿಂದ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ವಿಶೇಷವಾಗಿ ಕ್ಷೇತ್ರದ ಅಲಂಕಾರ ತಜ್ಞ ಶ್ರೀ ಆನಂದಬಾಯರಿ ಅಲಂಕರಿಸಿದ್ದರು..
ಕ್ಷೇತ್ರದ ಪ್ರದಾನ ಅರ್ಚಕ ಅನಿಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು..
ಪಳ್ಳಿ ಗುರುರಾಜ ಭಟ್ ದೇವನರ್ತನ ನೆರವೇರಿಸಿದರು… ರಾತ್ರಿ ಪ್ರಸಾದ ವಿತರಣೆ ನೆರವೇರಿತು
ಭಕ್ತರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಬಲಿ ಉತ್ಸವ ಅಭೂತಪೂರ್ವವಾಗಿ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ