ಹೊಸದಿಲ್ಲಿ: ಮೇ 25:ಭಾರತದಲ್ಲಿ ವಾಹನ ಚಾಲನಾ ಪರವಾನಗಿ ಬೇಕೆಂದರೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೇ ಪರೀಕ್ಷೆಯನ್ನು ಎದುರಿಸಿ ತಿಂಗಳಾನುಗಟ್ಟಲೆ ಕಾಯಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಯಾವುದೇ ಅಧಿಕೃತ ಖಾಸಗಿ ವಾಹನ ತರಬೇತಿ ಸಂಸ್ಥೆಯಲ್ಲಿ ಪರೀಕ್ಷೆಯನ್ನು ಬರೆಯಬಹುದು
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇದೀಗ ನಿಯಮಗಳನ್ನು 1ರಿಂದಲೇ ಜಾರಿಗೆ ಬರಲಿದೆ. ಪ್ರಸ್ತುತ ಅತ್ಯಂತ ಸಂಕೀರ್ಣವಾಗಿರುವ ಡ್ರೈವಿಂಗ್ ಲೈಸೆನ್ಸ್ ವಿತರಣೆಯ ವ್ಯವಸ್ಥೆಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಇದೀಗ ಈ ಬದಲಾವಣೆಯನ್ನು ತಂದಿದೆ
ಅರ್ಜಿದಾರರು ಈಗ ತಮ್ಮ ಚಾಲನಾ ಪರೀಕ್ಷೆಯನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಬದಲಾಗಿ ತಮ್ಮ ಆಯ್ಕೆಯ ಯಾವುದೇ ಅಧಿಕೃತ ಕೇಂದ್ರದಲ್ಲಿ ತೆಗೆದುಕೊಳ್ಳಬಹುದು. ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸುವ ಸಲುವಾಗಿ ಈ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಅಧಿಕಾರ ನೀಡಲಿದೆ. ಅವರು ಪರೀಕ್ಷೆಗಳನ್ನು ನಡೆಸಿ ಅರ್ಹರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಿವೆ.
ಪರಿಸರ ಸಂರಕ್ಷಣೆಗೆ ಆದ್ಯತೆ
9 ಲಕ್ಷಕ್ಕೂ ಅಧಿಕ ಹಳೆಯದಾದ ಅಧಿಕ ಹೊಗೆ ಹೊರಹಾಕುವ ಸರ್ಕಾರಿ ವಾಹನಗಳನ್ನು ಗುರುತಿಸಿ ಸೇವೆಯಿಂದ ನಿವೃತ್ತಗೊಳಿಸುವ ಗುರಿಯನ್ನು ಹೊಸ ನಿಯಮ ಹೊಂದಿದೆ.
ಕಟ್ಟುನಿಟ್ಟಿನ ದಂಡ ನೀತಿ
ಅಧಿಕೃತ ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದರೆ ಈಗ 1000ದಿಂದ 2000 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತಿದೆ. ಅಪ್ರಾಪ್ತ ವಯಸ್ಸಿನವರು ಎಲ್ಲಾದರೂ ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ ಹೆಚ್ಚುವರಿಯಾಗಿ 25 ಸಾವಿರ ರೂಪಾಯಿ ದಂಡ ಮತ್ತು ಡ್ರೈವಿಂಗ್ ಲೈಸೆನ್ಸ್ ರದ್ದತಿ ಸೇರಿದಂತೆ ಕಠಿಣ ದಂಡವನ್ನು ಎದುರಿಸಬೇಕಾಗುತ್ತದೆ.
ಅರ್ಜಿ ಪ್ರಕ್ರಿಯೆ ಮತ್ತು ಶುಲ್ಕ
ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್(https://parivahan.gov.in/parivahan/) ಮೂಲಕ ಲಭ್ಯವಿದೆ. ಆದರೆ ಅರ್ಜಿದಾರರು ತಮ್ಮ ಅರ್ಜಿಯನ್ನು ಸ್ತಳೀಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲೇ ಖುದ್ದಾಗಿ ಸಲ್ಲಿಸಬೇಕಾಗುತ್ತದೆ.