ಉಡುಪಿ :ಮೇ 24:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಪ್ರಯುಕ್ತ ಪಂಚವಂಶತಿ ದ್ರವ್ಯ ಮೀಲಿತ ಅಷ್ಟೋತ್ತರ ಶತ ಬ್ರಹ್ಮಕುಂಬಾಭಿಷೇಕ ಕ್ಷೇತ್ರದ ಧರ್ಮದ ಶ್ರೀ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹೇರೂರು ಆನಂದ ಭಟ್ ಹಾಗೂ ಯುತ ಗಣೇಶ ಸರಳಾಯ ಇವರ ನೇತೃತ್ವದಲ್ಲಿ ವೇದ ಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ನೆರವೇರಿಸಿದರು…
ದಿನಾಂಕ 23 ಗುರುವಾರ ಪ್ರಾತಕ್ಕಾಲಾ ಪ್ರಧಾನ ಯಾಗ ಹಾಗೂ ಬೆಳಗ್ಗೆ ಒದಗಿದ 9.45ರ ಮಿಥುನ ಲಗ್ನ ಸುಮಹೂರ್ತದಲ್ಲಿ ಕುಂಭಾಭಿಷೇಕ ನೆರವೇರಿತು..
ಕ್ಷೇತ್ರದ ಶ್ರೀಯುತ ಆನಂದಬಾಯರಿ ದುರ್ಗಾ ಆದಿಶಕ್ತಿ ದೇವಿಯನ್ನು ಸರ್ವಾಲಂಕೃತಗೊಳಿಸಿದರು. ಮಹಾಪೂಜೆಯನ್ನು ಕ್ಷೇತ್ರದ ಅರ್ಚಕ ಶ್ರೀ ಅನಿಶ್ ಆಚಾರ್ಯ ನೆರವೇರಿಸಿದರು. ಪಲ್ಲಪೂಜೆ ಯ ಬಳಿಕ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಡಾಕ್ಟರ್ ಮಂಜರಿ ಚಂದ್ರ ಪುಷ್ಪರಾಜ ನೇತ್ರತ್ವದ ಸೃಷ್ಟಿ ಕಲಾಕೂಟೀರದ ನೃತ್ಯಾರ್ತಿಗಳಿಂದ ಹಾಗೂ ಭ್ರಮರಿ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ್ ಶಿಷ್ಯರಿಂದ ನಿರಂತರ ನೃತ್ಯಸೇವೆ ನೆರವೇರಿತು..
ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಖ್ಯಾತ ಸೆಕ್ಸಾ ಫೋನ್ ವಾದಕ ವಿಜಯಶೇರಿಗಾರ್ ಮತ್ತು ಬಳಗದವರಿಂದ ನಾದ ಸೇವೆ, ನೆರವೇರಿತು.. ಮಧ್ಯಾಹ್ನ ಮಹಾಸಂತರಪಣೆಯಲ್ಲಿ ಸಹಸ್ರಾರ್ ಭಕ್ತರುಗಳು ಪ್ರಸಾದ ಸ್ವೀಕರಿಸಿದರು
ದೇವತಾರಾಧನೆ ಸಮಾರಾಧನೆ ಹಾಗೂ ಕಲಾ ರಾಧನೆಯಿಂದ ಉತ್ಸವ ಮಹೋತ್ಸವವಾಗಿ ಶ್ರೀ ವಿಜ್ರಂಬಣೆಯಿಂದ ಸಂಪನ್ನಗೊಳ್ಳುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ತಿಳಿತಿರುತ್ತಾರೆ..