ಉಡುಪಿ :ಮೇ 21:ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀ ವಿದ್ಯಮಾನ್ಯ ತೀರ್ಥರ ಉತ್ತರಾಧನೆ ಪ್ರಯುಕ್ತ ಚಿನ್ನದ ಮತ್ತು ನವರತ್ನ ರಥದ ರಥೋತ್ಸವ ಕಾರ್ಯಕ್ರಮ ನಡೆಯಿತು.
ಚಿನ್ನದ ರಥದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿತ್ತು ಹಾಗೂ ನವರತ್ನ ರಥದಲ್ಲಿ ವಿದ್ಯಾಮಾನ್ಯ ತೀರ್ಥರ ಭಾವಚಿತ್ರ ಹಾಗೂ ಅವರು ರಚಿಸಿರುವ ಗ್ರಂಥಗಳನ್ನು ಇಟ್ಟು, ವಿವಿಧ ಬಗೆಯ ವಾದ್ಯ ಸೇವೆಯೊಂದಿಗೆ ರಥೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು.
ಶ್ರೀ ಪುತ್ತಿಗೆ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಈ ರಥೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಿತು. ನಂತರ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಗ್ರಿ ರಾಘವೇಂದ್ರ ಉಪಾಧ್ಯಯರಿಂದ ಸಂಪಾದಿತ ವಿಧ್ಯಾಮಾನ್ಯ ತೀರ್ಥ ಸಂದೇಶ ರತ್ನಮಾಲಾ ಗ್ರಂಥದ ಬಿಡುಗಡೆ ಕಾರ್ಯಕ್ರಮ ನಡೆಯಿತು.
ನಂತರ ಪುತ್ತಿಗೆ ಹಿರಿಯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.