ಉಡುಪಿ:ಮೇ 20:ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೆ ಪ್ರತಿಷ್ಠ ವರ್ಧಂತಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ..
ಆ ಪ್ರಯುಕ್ತ ಕ್ಷೇತ್ರದಲ್ಲಿ ತಾರೀಕು 20ರ ಸೋಮವಾರದಂದು ಸಂಜೆ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ..
ತೋರಣ ಮುಹೂರ್ತ ಉಗ್ರಾಣ ಮುಹೂರ್ತ ವಾಸ್ತು ರಾಕ್ಷೋಜ್ಞಾದಿ ಪ್ರಕ್ರಿಯೆಗಳು ಪ್ರಕಾರ ಬಲಿ ಸಪ್ತ ಶುದ್ಧಿ ಪ್ರಸಾದ ಶುದ್ಧಿ
ತಾರೀಕು 21ರ ಮಂಗಳವಾರ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ.. ಆಚಾರ್ಯ ದಿ ಋತ್ವಿಕ್ ವರ್ಣಿ ದೇವನಾಂದಿ ಆದ್ಯ ಗಣಪತಿಯಾಗ ಪರಿವಾರ ದೇವರುಗಳಿಗೆ ಪ್ರಧಾನ ಯಾಗ, ಸ್ನಪನ ಕಲಶಾ ಅಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ ಮಹಾ ಅನ್ನಸಂತರ್ಪಣೆ
ತಾರೀಕು 22ರ ಬುಧವಾರ ಶ್ರೀ ಕ್ಷೇತ್ರದ ನಾಗಾಲಯದ ಪ್ರತಿಷ್ಠ ವರ್ಧಂತಿ ಮಹೋತ್ಸವ ದ ಪ್ರಯುಕ್ತ ಪಂಚ ವಿಂಷತಿ ಕಲಶಾರಾಧನೆ ಪ್ರಧಾನ ಯಾಗ ಕಲಶಾಭಿಷೇಕ
ಆಶ್ಲೇಷ ಬಲಿದಾನ
ಅಷ್ಟ ವಟು ಆರಾಧನೆ
ಪರಿವಾರ ದೇವರುಗಳಿಗೆ ನವಕ ಕಲಶಾ ಅಭಿಷೇಕ ಷಟ್ ಶಿರಾ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ ಪರಿವಾರ ಪೂಜೆ ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ
ತಾರೀಕು 23 ರ ಗುರುವಾರದಂದು ಬೆಳಿಗ್ಗೆ ಒದಗುವ ಮಿಥುನ ಲಗ್ನ ಸುಮೂರ್ತದಲ್ಲಿ ಶ್ರೀ ಚಕ್ರ ಪೀಠ ಸುರಪೂಜಿತೆಗೆ ಪಂಚ ವಿಂಸತಿ ದ್ರವ್ಯ ಮಿಳಿತ ಅಷ್ಟೋತ್ತರ ಶತಬ್ರಹ್ಮ ಕುಂಭಾಭಿಷೇಕ.. ಮಹಾಪೂಜೆ ಪಲ್ಲ ಪೂಜೆ ಮಹಾ ಅನ್ನಸಂತರ್ಪಣೆ
ಸಂಜೆ ಗಂಟೆ ಆರರಿಂದ ಆರಾಧನಾ ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ನೆರವೇರಲಿದೆ
ತಾರೀಕು 24ರ ಶುಕ್ರವಾರದಂದು ಶ್ರೀ ಮಹಾ ಚಂಡಿಕಾಯಾಗ, ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾದನೆ ಮಹಾಸಂಪ್ರೋಕ್ಷಣೆ ಮಹಾ ಮಂತ್ರಾಕ್ಷತೆ ನೆರವೇರಲಿದೆ..
ಪ್ರತಿದಿನ ಸಂಜೆ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ಷೇತ್ರದ ವಿಶೇಷ ಸೇವೆಯಾದ ನಾಟ್ಯರಾಣಿ ಗಂಧರ್ವ ಪ್ರೀತಿಯರ್ಥ ವಿವಿಧ ನೃತ್ಯಾರ್ತಿಗಳಿಂದ ನೃತ್ಯಸೇವೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ