ಹುಬ್ಬಳ್ಳಿ:ಮೇ 17:ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ದಾರುಣವಾಗಿ ಕೊಲೆ ಮಾಡಿದ್ದ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವೀರಾಪುರ ಓಣಿಯಲ್ಲಿ ನಡೆದಿದ್ದ ಅಂಜಲಿ ಎಂಬ ಅಮಾಯಕ ಯುವತಿಯ ಕೊಲೆ ನಡೆದಿತ್ತು. ಕೊಲೆಗಡುಕ ಅಂಜಲಿ ಮನೆಗೇ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದ.
ಹುಬ್ಬಳ್ಳಿ ಪೊಲೀಸರು ಗಿರೀಶ್ ಪತ್ತೆಗೆ ಎರಡು ತಂಡಗಳನ್ನು ರಚಿಸಿ ಆತನಿಗಾಗಿ ಬಲೆ ಬೀಸಿದ್ದರು. ನಿಖರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಗಿರೀಶ್. ಅಡಗಿದ್ದ ಸ್ಥಳವನ್ನು ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿ ಹುಬ್ಬಳ್ಳಿಗೆ ಕರೆತರುತ್ತಿದ್ದಾರೆ.