ಮಣಿಪಾಲ, ಮೇ 11, 2024 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್ ಸಂಸ್ಥೆಗಳು ಅಂತರಾಷ್ಟ್ರೀಯ ದಾದಿಯರ ದಿನ-2024 ನ್ನು ವಿವಿಧ ಚಟುವಟಿಕೆಗಳೊಂದಿಗೆ ಇತ್ತೀಚೆಗೆ ಆಚರಿಸಿದವು. ಇದು ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮದಿನವೂ ಆಗಿದ್ದು 2024ರ ಅಂತಾರಾಷ್ಟ್ರೀಯ ದಾದಿಯರ ಮಂಡಳಿ [ಇಂಟರ್‌ನೇಶನಲ್ ಕೌನ್ಸಿಲ್ ಆಫ್ ನರ್ಸಸ್ ಫಾರ್ 2024] ಯು ಈ ಸಲದ ಘೋಷ ವಾಕ್ಯ ‘ನಮ್ಮ ದಾದಿಯರು, ನಮ್ಮ ಭವಿಷ್ಯ; ಆರೈಕೆಯ ಆರ್ಥಿಕ ಶಕ್ತಿ”ಸಭಾಕಾರ್ಯಕ್ರಮವು ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಮೇ 10. 2024 ರಂದು ಜರಗಿದ್ದು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಡೀನ್ ಡಾ. ಜುಡಿತ್ ಎ. ನೊರೊನ್ಹ ಅವರು ಸ್ವಾಗತಿಸಿದರು.
ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಸಂಯೋಜಕಿ ರಂಜನಿ ಪಿ. ಅವರು ಅಂತಾರಾಷ್ಟ್ರೀಯ ದಾದಿಯರ ದಿನದ ಚಟುವಟಿಕೆಗಳ ಕುರಿತ ಸಮಗ್ರ ವರದಿಯನ್ನು ಪ್ರಸ್ತುತಪಡಿಸಿದರು. ಈ ಚಟುವಟಿಕೆಗಳು ಕವಿತೆ ರಚನೆ, ಭಾಷಣ ಸ್ಪರ್ಧೆ, ಕೊಲಾಜ್ ಮತ್ತು ಭಿತ್ತಿಚಿತ್ರ ಸ್ಪರ್ಧೆಗಳನ್ನು ಒಳಗೊಂಡಿದ್ದು ಕಾರ್ಯಾಗಾರಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು..
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಎಸೋಸಿಯೇಟ್ ಡೀನ್ ಡಾ. ಟೆಸ್ಸಿ ಟ್ರೀಸಾ ಜೋಸ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮಾಹೆಯ ಮಣಿಪಾಲದ ಬೋಧಕ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅವರು, ರೋಗಿಗಳ ಆರೈಕೆಯಲ್ಲಿ ದಾದಿಯರು ವಹಿಸುವ ಮೌಲಿಕ ಸೇವೆ ಮತ್ತು ಅವರು ರೋಗಿಗಳೊಂದಿಗೆ ಕಳೆಯುವ ಮಹತ್ತ್ವದ ಸಮಯದ ಕುರಿತು ಮಾತನಾಡಿದರು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಶಿಸ್ತು ಮತ್ತು ಅತ್ಯುತ್ತಮ ತರಬೇತಿಯ ಬದ್ಧತೆಯನ್ನು ಹೊಂದಿದೆ. ಕಸ್ತೂರ್ಬಾ ಆಸ್ಪತ್ರೆಯು ಅತ್ಯುತ್ತಮವಾದ ಬಹುಶಿಸ್ತೀಯ ಕಲಿಕಾ ವಾತಾವರಣವನ್ನು ಒದಗಿಸುತ್ತಿದೆ ಎಂದು ಶ್ಲಾಘಿಸಿದರು. ದಾದಿಯರಿಗೆ ಆವಶ್ಯಕವಾದ ಸೌಕರ್ಯ ಮತ್ತು ಸಂಪನ್ಮೂಲಗಳು ಲಭ್ಯವಾಗುವ ಅಗತ್ಯತೆಯನ್ನು ಒತ್ತಿಹೇಳಿದರು
ಕಸ್ತೂರ್ಬಾ ಆಸ್ಪತ್ರೆಯ ನಿವೃತ್ತ ಸ್ಟಾಫ್ ನರ್ಸ್ ವಿವಿಯನ್ ವಿಲ್‌ಫ್ರೆಡ್ ಸೋನ್ಸ್ ಮತ್ತು ಕಡೆಕಾರಿನ ಗ್ರಾಮೀಣ ಹೆರಿಗೆ ಮತ್ತು ಶಿಶುಪಾಲನಾ ಕೇಂದ್ರದ ನಿವೃತ್ತ ಎನ್‌ಎನ್‌ಎಂ ಸಿಬ್ಬಂದಿ ಸಾಕಮ್ಮ ಅವರನ್ನು ರೋಗಿಗಳ ಕ್ಷೇಮಪಾಲನೆ, ಸಾಮುದಾಯಿಕ ಆರೋಗ್ಯ ಕ್ಷೇತ್ರದ ಕೊಡುಗೆ ಮತ್ತು ವಿದ್ಯಾರ್ಥಿ ಕಲಿಕೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಸನ್ಮಾನಿಸಲಾಯಿತು.
ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಿನ್ಸಿಪಾಲ್ ಡಾ. ಲೀನಾ ಸೀಕ್ವೆರಾ ಅವರು ಸನ್ಮಾನಿತರ ಸಾಧನೆಯ ಕುರಿತು ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಹಸಂಯೋಜಕರಾದ ಡಾ. ಸವಿತಾ ಪ್ರಭು ಧನ್ಯವಾದ ಸಮರ್ಪಣೆ ಮಾಡಿದರು
ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜ್ ಆಫ್ ನರ್ಸಿಂಗ್‌ನ ಸಾಮುದಾಯಿಕ ಆರೋಗ್ಯ ಆರೈಕೆ ವಿಭಾಗದ ಪ್ರಾಧ್ಯಾಪಕರಾದ ಡಾ. ದೆವಿನಾ ಇ. ರೊಡ್ರಿಗಸ್ ಆವರು ‘”ನಮ್ಮ ದಾದಿಯರು. ನಮ್ಮ ಭವಿಷ್ಯ. ಆರೈಕೆಯ ಆರ್ಥಿಕ ಶಕ್ತಿ “ಎಂಬ ವಿಷಯದ ಕುರಿತು ಪರಿಣಾಮಕಾರಿಯಾದ ಕಲಾಪವನ್ನು ನಡೆಸಿಕೊಟ್ಟರು. ಅವರು ಆರೋಗ್ಯಪಾಲನೆಯ ಕ್ಷೇತ್ರದಲ್ಲಿ ದಾದಿಯರ ಪಾತ್ರವನ್ನು ಮತ್ತೊಮ್ಮೆ ಸಮರ್ಪಕವಾಗಿ ಪರಿಗಣಿಸುವ ಅಗತ್ಯವಿದೆ ಎಂದರು. ದಾದಿಯರ ಶಿಕ್ಷಣ, ತರಬೇತಿ, ಉದ್ಯೋಗ ಇತ್ಯಾದಿಗಳ ಹಲವು ವಿಷಯಗಳ ಕುರಿತು ಅವರು ಬೆಳಕು ಚೆಲ್ಲಿದರು. ದಾದಿಯರ ಸ್ಪರ್ಶದ ಹಿಂದೆ ಇರುವ ಅಮಿತವಾದ ಶ್ರದ್ಧೆ, ಅವಿಚ್ಚಿನ್ನವಾದ ಸಮರ್ಪಣಾಭಾವ, ರೋಗಿಗಳ ಅಗತ್ಯಕ್ಕೆ ಎಲ್ಲ ಸಂದರ್ಭದಲ್ಲಿ ಸ್ಪಂದಿಸುವ ಮನೋಭಾವವನ್ನು ಅರ್ಥಮಾಡಿಕೊಳ್ಳುವ ಆವಶ್ಯಕತೆಯನ್ನು ಒತ್ತಿ ಹೇಳಿದರು.
ದಾದಿಯರ ಸೇವೆಯ ಪ್ರಾಮುಖ್ಯದ ಕುರಿತ ಒಂದು ವಿಡಿಯೋ ಮತ್ತು ಸಂವಾದದೊಂದಿಗೆ ಈ ಕಲಾಪವು ಮುಕ್ತಾಯಗೊಂಡಿತು.
ಮಾಹೆಯ ಕಾಲೇಜ್ ಆಫ್ ನರ್ಸಿಂಗ್ ಮ್ತು ಮಣಿಪಾಲ್ ಕಾಲೇಜ್ ಸ್ಕೂಲ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು ಮತ್ತು ಬೋಧಕರಿಂದ ಸಾಂಸ್ಕೃತಿಕ ವಿವಿಧ ವಿನೋದಾವಳಿಗಳು ನಡೆದವು. ಪ್ರಸ್ತುತ ಕಾರ್ಯಕ್ರಮವು ಸುಸ್ಥಿರ ಅಭಿವೃದ್ಧಿಯ ಗುರಿ [ಸಸ್ಟೇನೇಬಲ್ ಡೆವಲಪ್‌ಮೆಂಟ್ ಗೋಲ್-4 ಗೆ ಹೊಂದಿಕೆಯಾಗುತ್ತಿದ್ದು ಎಲ್ಲರನ್ನು ಒಳಗೊಳ್ಳುವ ಮತ್ತು ಸಮಾನವಾಗಿರುವ ಗುಣಮಟ್ಟದ ಶಿಕ್ಷಣ ನೀಡಲು ಬದ್ಧವಾಗಿದೆ.