ಉಡುಪಿ:ಮೇ 11:ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ ಹೊಟೇಲ್ ವೈಟರ್‌ನಿಂದ ಲಕ್ಷಾಂತರ ರೂ. ಆನ್‌ಲೈನ್‌ನಲ್ಲಿ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.
ಹೆಜಮಾಡಿಯ ಕ್ರಿಸ್ಟನ್ ಡಿ’ಸೋಜಾ ವಂಚನೆಗೊಳಗಾದವರು. ಹೂಡೆಯ ಹೊಟೇಲ್‌ವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿರುವ ಇವರಿಗೆ ಮೇ 7, 8ರಂದು ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕರೆ ಬಂದಿತ್ತು.
ಸುಮಿತ್ ಹಾಗೂ ಸುಭಾಸ್ ಚೌವ್ಹಾಣ್ ತಾವು ಮ್ಯಾನೇಜರ್‌ಗಳು ಎಂದು ಪರಿಚಯಿಸಿಕೊಂಡು ಹಣವನ್ನು ಕೇಳಿ ಗೂಗಲ್ ಪೇ ಮೂಲಕ ಒಟ್ಟು 4,42,645 ರೂ. ಪಡೆದು ಉದ್ಯೋಗ ದೊರಕಿಸದೆ ಮತ್ತು ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.