ಮೇ 08: ಸುಮಾರು 300 ಮಂದಿ ಹಿರಿಯ ಪೈಲಟ್ ಗಳು ಸಾಮೂಹಿಕವಾಗಿ ರಜೆ ಹಾಕಿ, ತಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿದ್ದು, ಇದರಿಂದಾಗಿ ಸುಮಾರು 79 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಸಂಚಾರ ರದ್ದುಪಡಿಸಲಾಗಿದೆ ಎಂದು ವರದಿ ವಿವರಿಸಿದೆ.
ಟಾಟಾ ಗ್ರೂಪ್ ಒಡೆತನದ ನೂತನ ಉದ್ಯೋಗ ನೀತಿಯನ್ನು ವಿರೋಧಿಸಿ ಪೈಲಟ್ ಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರಸ್ತುತ ಪೈಲಟ್ ಗಳ ಜತೆ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಆಡಳಿತ ಮಂಡಳಿ ತಿಳಿಸಿದೆ.
ಏರ್ ಇಂಡಿಯಾ ಸಿಬಂದಿಗಳ ಸಮಸ್ಯೆಯನ್ನು ಪರಿಹರಿಸಲು ಆಡಳಿತ ಮಂಡಳಿ ಸತತವಾಗಿ ಪ್ರಯತ್ನಿಸುತ್ತಿದೆ. ಪ್ರಯಾಣಿಕರಿಗಾದ ತೊಂದರೆಗೆ ನಾವು ಕ್ಷಮೆ ಕೇಳುತ್ತಿದ್ದೇವೆ. ಈ ಪರಿಸ್ಥಿತಿಯಿಂದ ನಮ್ಮ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.