ಕಾರ್ಕಳ :ಮೇ 07:ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಮುಂದುವರೆಸುವಂತೆ ಆಗ್ರಹಿಸಿ ಬೈಲೂರುನಲ್ಲಿ ಸೋಮವಾರ ಜನಾಗ್ರಹ ಸಭೆಯು ನಡೆಯಿತು.
ಸಭೆಯನ್ನು ಉದ್ದೇಶಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಒಂದು ವರ್ಷಗಳಿಂದ ಅಪಪ್ರಚಾರ ಎಲ್ಲೆ ಮೀರಿ ಮುಂದುವರೆದಿದೆ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದರೆ ತನಿಖೆ ನಡೆಸಬೇಕು, ತನಿಖೆ ನೆಪದಲ್ಲಿ ಕಾಮಗಾರಿಗೆ ತಡೆ ಮಾಡಬಾರದು, ಅಪಪ್ರಚಾರ ನಿಲ್ಲಿಸಬೇಕು, ಆದಷ್ಟು ಬೇಗ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಇಂದು ಕೂಡಾ ಆಗ್ರಹಿಸುತ್ತೇನೆ ಎಂದರು.
ಸಭೆಯಲ್ಲಿ ಎರ್ಲಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಸುನಿಲ್ ಹೆಗ್ಡೆ,ಜಿ.ಪಂ.ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ, ಎರ್ಲಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಸುನಿಲ್ ಹೆಗ್ಡೆ ಮತ್ತು ಓಂಕಾರ್ ನಾಯಕ್ ಮಾತನಾಡಿದರು.
ವೇದಿಕೆಯಲ್ಲಿ ಪ್ರಸಾದ್ ಕಾಮತ್, ಪ್ರಶಾಂತ್ ಶೆಟ್ಟಿ ಗುತ್ತುಮನೆ ಜಾರ್ಕಳ, ಮಹೇಶ್ ಶೆಣೈ ಬೈಲೂರು, ವಿವಿಧ ಗ್ರಾ.ಪಂ.ಅದ್ಯಕ್ಷರುಗಳು ಉಪಸ್ಥಿತರಿದ್ದರು.ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.