ಬ್ರಹ್ಮಾವರ, ಮೇ 04: ಹಿರಿಯ ನಾಟಿವೈದ್ಯ, ಕೃಷಿಕ ಹಂದಾಡಿ ಗೋವಿಂದ ಪೂಜಾರಿ (82) ಅಸೌಖ್ಯದಿಂದ ಮೇ . 3ರಂದು ಹಂದಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಹಿರಿಯ ಕೃಷಿಕರಾದ ಗೋವಿಂದ ಪೂಜಾರಿಯವರು ಸ್ತ್ರೀ ಸಂಬಂಧಿತ ಅನಾರೋಗ್ಯ ಸಮಸ್ಯೆಗಳಿಗೆ ಔಷಧಿ ಕೊಡುತ್ತಿದ್ದರು. ಜಾನುವಾರುಗಳ ಕಾಲುಬಾಯಿ, ಕೆಚ್ಚಲುಬಾವಿನಂತಹ ಕಾಯಿಲೆಗಳು ಮತ್ತು ಗರ್ಭಧಾರಣೆ ಇತ್ಯಾದಿಗಳಿಗೆ ಸಂಬಂಧಿಸಿ ನಾಟಿ ಔಷಧಿ ಕೊಡುತ್ತಿದ್ದರು.
ವಿವಿಧ ಕೃಷಿ ಪ್ರಯೋಗಗಳನ್ನು ನಡೆಸಿ ಇತರ ಕೃಷಿಕರಿಗೆ ಮಾರ್ಗದರ್ಶಿಯಾಗಿದ್ದರು. ಪಂಚಾಯಿತಿದಾರರಾಗಿಯೂ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ ಪುತ್ರನಾದ ಉದಯವಾಣಿಯ ಹಿರಿಯ ಉಪಸಂಪಾದಕ ಗಿರೀಶ್ ಎಚ್., ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.