ಅಜೆಕಾರು :ಮೇ 03: ಮನೆಯ ಟೆರೇಸಿನಲ್ಲಿ ಮಲಗಿದ್ದ ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಅಜೆಕಾರು ಬೊಂಡುಕುಮೇರಿ ಆಶ್ರಯ ನಗರ ನಿವಾಸಿ ಸುಂದರ್ ನಾಯ್ಕ (55) ಮೃತ ಶಿಕ್ಷಕ. ಅವರು ಮೇ 1ರಂದು ರಾತ್ರಿ ಸುಮಾರು 10.30ರ ವೇಳೆಗೆ ಟೆರೇಸಿನಲ್ಲಿ ಮಲಗಿದ್ದರು.
ಬೆಳಗ್ಗೆ 6.30ರ ವೇಳೆಗೆ ಮನೆಯವರು ನೋಡುವಾಗ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಗಾಢಾ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ.