ಹೊಸದಿಲ್ಲಿ : COVID-19 ಲಸಿಕೆಗಳಿಗಾಗಿ ನೀಡಲಾದ COWIN ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮಾಯವಾಗಿದೆ. ಈ ಮೊದಲು ಕೋವಿನ್ ಲಸಿಕೆ ಪಡೆದ ಜನರಿಗೆ ಸಿಗುತ್ತಿದ್ದ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಹಾಕಲಾಗಿತ್ತು.
ಮೋದಿಯವರ ಚಿತ್ರ ತೆಗೆದುಹಾಕಿದ್ದನ್ನು ಬುಧವಾರ ಸಾಮಾಜಿಕ ಮಾಧ್ಯಮ ಬಳಕೆದಾರ ನಡುವೆ ಚರ್ಚೆಗೆ ಕಾರಣವಾಗಿದೆ. ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬಂದ ತಕ್ಷಣ ಎಲ್ಲ ಸರ್ಕಾರಿ ವೆಬ್‌ಸೈಟ್ ನಿಂದ ಮೋದಿಯವರ ಭಾವಚಿತ್ರಕ್ಕೆ ಖೋಕ್ ನೀಡಲಾಗಿದೆ ಎನ್ನಲಾಗಿದೆ.
ಈತನ್ಮಧ್ಯೆ ಲಸಿಕೆಯ ಅಡ್ಡ ಪರಿಣಾಮದ ಕುರಿತು ದೊಡ್ಡ ಪ್ರಮಾಣದ ಚರ್ಚೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ.