ಬೆಂಗಳೂರು: ಏಪ್ರಿಲ್ 29:ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಈ ಮೂಲಕ ಹಲವು ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಈ ವಾಹಿನಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನು ನೀಡುವ ಕೆಲಸವನ್ನು ಈ ‘ಮಹಾನಟಿ’ ರಿಯಾಲಿಟಿ ಶೋ ಮಾಡುತ್ತಿದೆ.
ಮಹಾನಟಿ’ ರಿಯಾಲಿಟಿ ಶೋ ಶನಿವಾರ ಹಾಗೂ ಭಾನುವಾರ ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋನಲ್ಲಿ ಸ್ಪರ್ಧಿಯೊಬ್ಬರು ಆ್ಯಕ್ಟಿಂಗ್ ಮಾಡುವಾಗ ಬಳಕೆ ಮಾಡಿದ ಶಬ್ದ ಚರ್ಚೆ ಹುಟ್ಟುಹಾಕಿದೆ. ‘ಮೆಕ್ಯಾನಿಕ್ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ..’ ಎನ್ನುವ ವಾಕ್ಯ ಬಳಕೆ ಆಗಿದೆ. ಇದು ಮೆಕ್ಯಾನಿಕ್ ಕೆಲಸ ಮಾಡುವವರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ
ಚಿಕ್ಕನಾಯಕನಹಳ್ಳಿಯ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ದಾಖಲು ಮಾಡಿದ್ದಾರೆ. ಈ ಶೋನ ನಿರ್ಮಾಪಕರು, ನಿರ್ದೇಶಕರು, ಸ್ಪರ್ಧಿ ಗಗನಾ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಮೇಶ್ ಅರವಿಂದ್, ನಟಿ ಪ್ರೇಮ ಮತ್ತಿತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಈ ಮಹಾನಟಿ ಶೋನಲ್ಲಿ ರಮೇಶ್ ಅರವಿಂದ್ ಅವರು ಒಂದೊಂದು ಟಾಪಿಕ್ ಕೊಡುತ್ತಾರೆ. ಅದರ ಬಗ್ಗೆ ಸ್ಪರ್ಧಿಗಳು ನಟಿಸಬೇಕು. ಮಹಾನಟಿಯರು ತಕ್ಷಣೆಕ್ಕೆ ಡೈಲಾಗ್ ರೆಡಿ ಮಾಡಿಕೊಂಡು ನಟಿಸುತ್ತಾರೆ. ಈ ಬಾರಿ ಗಗನಾಗೆ ಮೆಕ್ಯಾನಿಕಲ್ ಲೈಫ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ದರು. ನಿಮ್ಮ ತಂಗಿ ಮೆಕ್ಯಾನಿಕಲ್ ಅವರನ್ನು ಮದುವೆ ಆಗಿದ್ದರೆ ಏನು ಮಾಡುತ್ತೀಯಾ? ಎಂದು ಸ್ಕಿಟ್ ಮಾಡಬೇಕಿತ್ತು. ಡೈಲಾಗ್ ಹೇಳುವ ಭರದಲ್ಲಿ ಮೆಕ್ಯಾನಿಕ್ ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂದಿದ್ದಾರೆ, ಈ ಬಗ್ಗೆ ರಮೇಶ್ ಕೂಡ ಬೇಸರ ವ್ಯಕ್ತಪಡಿಸಿದರು. ಜತೆಗೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ್ಯ ವ್ಯಕ್ತವಾಗಿದೆ. ಇನ್ನೊಂದೆಡೆ ಚಿಕ್ಕನಾಯಕನಹಳ್ಳಿಯ ದ್ವಿಚಕ್ರವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ ಎಂದು ದೂರುನೀಡಿದ್ದಾರೆ.