ಪಡುಬಿದ್ರಿ:ಏಪ್ರಿಲ್ 26:ಇಲ್ಲಿನ ಜಂಕ್ಷನ್ ನಲ್ಲಿ ಸರಕು ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಹೆದ್ದಾರಿ ಸಂಚಾರಕ್ಕೆ ಅಡಚಣೆಯುಂಟಾಯಿತು.
ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಸರಕನ್ನು ಹೇರಿ ಸಾಗುತ್ತಿದ್ದ ಲಾರಿಯೊಂದರ ಟಯರ್ ಒಡೆದು ಹೋಗಿ ರಸ್ತೆ ಮಧ್ಯೆಯೇ ನಿಂತಿದೆ.ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿಗೆ ಮಂಗಳೂರಿನತ್ತ ಮುಖಮಾಡಿ ನಿಂತಿದೆ.
ಇದರಿಂದಾಗಿ ವಾಹನ ಸಂಚಾರಕ್ಕೆ ಹೆಚ್ಚಿನ ತೊಡಕಾಗದಿದ್ದರೂ ಲಾರಿಯನ್ನು ಶೀಘ್ರ ತೆರವುಗೊಳಿಸಲು ಪಡುಬಿದ್ರಿ ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬ್ಯಾರಿಕೇಡ್ ಗಳನ್ನಿರಿಸಿ ಇಲ್ಲಿ ಪೊಲೀಸರು ಮುನ್ನೆಚ್ಚರಿಕೆಯ ಕ್ರಮಗಳ ಕೈಗೊಂಡಿದ್ದಾರೆ