ಚಿತ್ರದುರ್ಗ:ಏಪ್ರಿಲ್ 26:ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಸಮೀಪದ ಗೊಲ್ಲರಗಟ್ಟಿ ಮತಗಟ್ಟೆಯಲ್ಲಿ ಎಪಿಆರ್ ಒ ಆಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿ ಯಶೋಧಮ್ಮ( 58) ಹೃದಯಾಘಾತದಿಂದ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ ಬಿ.ಆನಂದ್, ಮತದಾನಕ್ಕೆ ತೊಂದರೆಯಾಗದ ರೀತಿ ಬೇರೆ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ ಅವರು ಯಶೋಧಮ್ಮ ಅವರು ನಮ್ಮಲ್ಲಿ ಅರೋಗ್ಯ ಸಮಸ್ಯೆಯ ಕುರಿತು ಏನು ಹೇಳಿಕೊಂಡಿರಲಿಲ್ಲ ಅಲ್ಲದೆ ಮತದಾನ ಆರಂಭದಲ್ಲಿ ಲವಲವಿಕೆಯಿಂದಲೇ ಕರ್ತವ್ಯ ನಿರ್ವಹಿಸಿದ್ದರು. ದಿಢೀರನೆ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಯಶೋದಮ್ಮ ಅವರು ಚಳ್ಳಕೆರೆ ತಾಲೂಕಿನ ಬೊಮ್ಮಸಂದ್ರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.