ಬ್ರಹ್ಮಾವರ:ಏಪ್ರಿಲ್ 26:ಉಪ್ಪೂರು ಗ್ರಾಮದ ಕೊಳಲಗಿರಿಯ ಸ್ಟೀವನ್ ಡಿ’ಸೋಜಾ (39) ಗುರುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾರೆ.
ಟೆನ್ಶನ್‌ನಲ್ಲಿದ್ದ ಅವರನ್ನು ಮಾತನಾಡಿಸಲು ಹೋದ ಪತ್ನಿ ಮೇಲೆ ರೇಗಾಡಿದ್ದರು. ಮಧ್ಯಾಹ್ನದ ವೇಳೆ ಪತ್ನಿ ಹಾಗೂ ಮಕ್ಕಳಲ್ಲಿ ನನ್ನದು ತಪ್ಪಾಗಿದೆ, ನನ್ನನ್ನು ಕ್ಷಮಿಸಿ ಎಂದು ಹೇಳಿ ಮನೆಯಿಂದ ತೆರಳಿದವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಪತ್ನಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.