ಉಡುಪಿ: ಏಪ್ರಿಲ್ 23:ಬೈಕ್ ವೊಂದು ಸ್ಕಿಡ್ ಆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಬಳಿ ಸಂಭವಿಸಿದೆ.
ಕೋಟ ಮಣೂರು ನಿವಾಸಿ ಸುರೇಶ್ ಆಚಾರ್ಯ ಅವರ ಮಗ ವಿಕಾಸ್ ಆಚಾರ್ಯ (22) ಮೃತದುರ್ದೈವಿ.
ಇವರು ನಿನ್ನೆ ರಾತ್ರಿ 1:30 ರ ಸುಮಾರಿಗೆ ಸಾಸ್ತಾನ ದಿಂದ ಕೋಟ ಮಣೂರು ಕಡೆ ಬರುತ್ತಿದ್ದರು. ಈ ವೇಳೆ ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಗಂಭೀರವಾಗಿ ಗಾಯಗೊಂಡ ಸುರೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ