ಮಂಗಳೂರು: ಏಪ್ರಿಲ್ 22:ಹೆಬ್ಬಾವೊಂದರ ದೇಹದಲ್ಲಿ ಭರ್ಜರಿ 11 ಏರ್‌ಬುಲ್ಲೆಟ್ ಪತ್ತೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಆನೆಗುಂಡಿ ಬಳಿ ಹೆಬ್ಬಾವೊಂದು ಪರ್ಶಿಯನ್ ಬೆಕ್ಕನ್ನು ತಿಂದು ನುಂಗಲಾರದೆ ಒದ್ದಾಡುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಉರಗತಜ್ಞರಿಗೆ ಕರೆ ಮಾಡಿ ಬರ ಹೇಳಿದಾಗ, ಅವರು ಬಂದು ಹೆಬ್ಬಾವಿನ ದೇಹ ಪರಿಶೀಲನೆ ಮಾಡಿದಾಗ ದೇಹದಲ್ಲಿ 11 ಬುಲ್ಲೆಟ್ ಇರುವ ವಿಷಯ ತಿಳಿದು ಬಂದಿದೆ.
ಹೆಬ್ಬಾವು ಪರ್ಶಿಯನ್ ಕ್ಯಾಟ್ ತಿಂದು ಅದರ ಕತ್ತಿನ ಕೆಳ ಭಾಗದಲ್ಲಿ ಬಲೆ ಸಿಲುಕಿದ್ದು ಅದು ನುಂಗಲಾರದೆ ಒದ್ದಾಡುತ್ತಿದ್ದು, ಉರಗತಜ್ಞರಾದ ಭುವನ್ ದೇವಾಡಿಗ ಅವರು ಸ್ಥಳಕ್ಕೆ ಬಂದಿದ್ದು, ಇಲಾಖೆಯವರಿಗೆ ಮಾಹಿತಿಯನ್ನು ನೀಡಿದ್ದು, ನಂತರ ಬಲೆ ತೆರವು ಮಾಡಿ ಹೆಬ್ಬಾವನ್ನು ರಕ್ಷಣೆ ಮಾಡಲಾಯಿತು.
ಪಶುವೈದ್ಯರು ಯಶಸ್ವಿ ಚಿಕಿತ್ಸೆಯನ್ನು ಮಾಡಿದ್ದು, ಎಕ್ಸರೇ ಮಾಡಿಸಿದ ಸಂದರ್ಭದಲ್ಲಿ ದೇಹದಲ್ಲಿ 11 ಏರ್ ಬುಲ್ಲೆಟ್ ಪತ್ತೆಯಾಗಿದೆ. ಏರ್‌ಗನ್‌ನಿಂದ ಹೆಬ್ಬಾವಿಗೆ ಹಲವು ವರ್ಷಗಳ ಹಿಂದೆ ಶೂಟ್ ಮಾಡಿದ್ದಿರಬಹುದು. ಹಾಗಾಗಿ ಕೆಲವೊಂದು ಬುಲೆಟ್‌ಗಳ ಮೇಲೆ ಚರ್ಮ ಬೆಳೆದಿತ್ತು. ಎರಡು ಬುಲ್ಲೆಟ್ ತೆಗೆಯಲಾಗಿದೆ ಎಂದು ವೈದ್ಯರು ಹೇಳಿದ್ದು, ಹೆಬ್ಬಾವು ಚೇತರಿಸುತ್ತಿದೆ ಎಂದು ಹೇಳಲಾಗಿದೆ.