ಕಾರ್ಕಳ :ಏಪ್ರಿಲ್ 22:ದಿನಾಂಕ 21.04.2024 ರಂದು ಕಾರ್ಕಳ ವೃತ್ತ ,ಕಾರ್ಕಳ ನಗರ ಪೊಲೀಸ್ ಠಾಣೆ ಹಾಗೂ ಗುಜರಾತ್ ರಾಜ್ಯ ಮೀಸಲು ಪೊಲೀಸ್ ಪಡೆ ಸೇರಿ ಲೋಕಸಭಾ ಚುನಾವಣಾ ಅಂಗವಾಗಿ ಕಾರ್ಕಳ ಅನಂತಶಯನ ವೃತ್ತದಿಂದ ಕಾರ್ಕಳ ವೆಂಕಟರಮಣ ದೇವಸ್ಥಾನದ ವರೆಗೆ ರೂಟ್ ಮಾರ್ಚ್ ಮಾಡಲಾಯಿತು.
ಸದ್ರಿ ರೂಟ್ ಮಾರ್ಚ್ ನಲ್ಲಿ ಶ್ರೀ ನರಸಪ್ಪ ತಹಶಿಲ್ದಾರ್ .ಕಾರ್ಕಳ ತಹಶಿಲ್ದಾರರು.ಶ್ರೀ ಅರವಿಂದ ಕಲಗುಜ್ಜಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಉಪವಿಭಾಗ ,ಶ್ರೀ ಮಂಜಪ್ಪ ಡಿ ಆರ್ .ಮಾನ್ಯ ವೃತ್ತ ನಿರೀಕ್ಷಕರು ಕಾರ್ಕಳ ವೃತ್ತ,ಹಾಗೂ ಕಾರ್ಕಳ ನಗರ .ಕಾರ್ಕಳ ಗ್ರಾಮಾಂತರ,ಅಜೆಕಾರು.ಹೆಬ್ರಿ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.