ಉಡುಪಿ :ಏಪ್ರಿಲ್ 22: ಶ್ರೀಪುತ್ತಿಗೆ ಮಠದ ಶ್ರೀ ಗಳವರ ಆದೇಶದಂತೆ ಪ್ರತಿವರ್ಷದಂತೆ ನಡೆಯುವ ವಸಂತ ಧಾರ್ಮಿಕ ಶಿಬಿರವನ್ನು ಇಂದು ಪುತ್ತಿಗೆ ಮಠದಲ್ಲಿ ಪರ್ಯಾಯ ಶ್ರೀಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಬಿರದಲ್ಲಿ ಕಲಿತ ಆಧ್ಯಾತ್ಮಿಕ ವಿದ್ಯೆ ನಮ್ಮ ಜೀವನ ಪರ್ಯಂತ ಶಾಶ್ವತವಾಗಿ ನಮ್ಮ ರಕ್ಷಿಸುವುದು. ಅಲ್ಲದೆ ಭಗವಂತನ ಅನುಗ್ರಹ ಮೂಲಕ ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮದಾಗಿರುವುದು.ಎಂದು ಶುಭ ಆಶೇರ್ವಾದ ಮಾಡಿ ನೂರಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಶ್ರೀ ಪಿ. ಎಸ್. ಆಚಾರ್ಯರಿಂದ ಪ್ರಾಯೋಜಿತ ಕೋಟಿ ಗೀತಾ ಲೇಖನ ದೀಕ್ಷೆ ನೀಡಿದರು. ಕಿರಿಯ ಶ್ರೀ ಗಳಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಸಾಧಕರಾಗಿ ಎಂದು ಹರಸಿದರು.
ಮುಖ್ಯ ಅಥಿತಿಗಳಾಗಿ ಮುಂಬಯಿಯ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ ಸುರೇಶ್ ರಾವ್ ಹಾಗೂ ಕೋಟಿ ಗೀತಾ ಲೇಖನದ ಪ್ರಚಾರಕರಾದ ಶ್ರೀ ಪಿ. ಎಸ್ ಆಚಾರ್ಯರು ಉಪಸ್ಥಿತರಿದ್ದರು ಅಲ್ಲದೆ ಶಿಬಿರದ ಸಂಪನ್ಮೂಲ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಶ್ರೀ ಮಹಿತೋಷ್ ಆಚಾರ್ಯರು ಸ್ವಾಗತಿಸಿದರು. ಶ್ರೀ ರವೀಂದ್ರ ಆಚಾರ್ಯರು ವಂದಿಸಿದರು. ಕಾರ್ಯಕ್ರಮ ಸಂಚಾಲಕರಾದ ಶ್ರೀ ರಮೇಶ್ ಭಟ್ ನಿರೂಪಿಸಿದರು.