ಉಡುಪಿ,ಏಪ್ರಿಲ್ 18: ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರು ನಾಳೆ ಎ.19ರ ಶುಕ್ರವಾರದಂದು ಉಡುಪಿಗೆ ಆಗಮಿಸಲಿದ್ದು, ಅಪರಾಹ್ನ 3:30ಕ್ಕೆ ನಗರದ ಹೊಟೇಲ್ ಕಿದಿಯೂರಿನ ಮಾಧವಕೃಷ್ಣ ಸಭಾಂಗಣದಲ್ಲಿ ಉಡುಪಿಯ ಕೂರ್ಮ ಫೌಂಡೇಷನ್ ವತಿಯಿಂದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಅವರ ಆಡಳಿತದ ವಿದೇಶಾಂಗ ನೀತಿಗಳು ಮತ್ತು ರಾಜತಾಂತ್ರಿಕ ಸುಧಾರಣೆಗಳ ಬಗ್ಗೆ ಈ ಸಂವಾದ ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಉಡುಪಿಯ ಅಧ್ಯಯನಶೀಲ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು, ಉದ್ಯಮಿಗಳು ಚಿಂತಕರು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂವಾದದ ಕೊನೆಯಲ್ಲಿ ಸಚಿವರೊಂದಿಗೆ ಪ್ರಶೋತ್ತರಕ್ಕೆ ಅವಕಾಶವಿದೆ ಎಂದು ಕೂರ್ಮ ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ