ಕಾರ್ಕಳ :ಏಪ್ರಿಲ್ 17:ಕಾರ್ಕಳ ಟೈಗರ್ಸ್- ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ವತಿಯಿಂದ ಏ. ೧೭ ರಂದು ಸಾಲ್ಮರದ ಗುರುದೀಪ್ ಗಾರ್ಡನ್ ನಲ್ಲಿ ಶ್ರೀ ರಾಮ ನವಮಿ ಸಂಭ್ರಮಾಚರಣೆ ನಡೆಯಿತು.
ಬೋಳ ಶ್ರೀನಿವಾಸ್ ಕಾಮತ್, ಹರೀಶ್ ಅಮೀನ್, ಸತೀಶ್ ಬಂಗೇರ, ಪ್ರಭಾಕರ ಶೆಣೈ ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಆದಿಶಕ್ತಿ ಭಜನಾ ಮಂಡಳಿ ಕಾರೋಲ್ ಗುಡ್ಡೆ ಮಿಯ್ಯಾರು, ಶ್ರೀ ಸಿರಿ ಭಜನಾ ಮಂಡಳಿ ಜಾರ್ಕಳ ಹಾಗೂ ಶ್ರೀ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿ ಎರ್ಲಪಾಡಿ ತಂಡದವರಿಂದ ಕುಣಿತ ಭಜನೆ ನಡೆಯಿತು.