ಬೆಂಗಳೂರು :ಏಪ್ರಿಲ್ 16: ಹಿರಿಯ ನಟ, ನಿರ್ಮಾಪಕ ದ್ವಾರಕೀಶ್(81) ಅವರು ಮಂಗಳವಾರ(ಏ.16 ರಂದು) ವಿಧಿವಶರಾಗಿದ್ದಾರೆ.
ಕಳೆದ ಕೆಲ ವಯೋಸಹಜದಿಂದ ಬಳಲುತ್ತಿದ್ದ ಅವರು ಹೃದಯಘಾತದಿಂದ ಅವರು ವಿಧಿವಶರಾದರು ಎಂದು ವರದಿಯಾಗಿದೆ.
ರಾತ್ರಿ ಹೊಟ್ಟೆ ನೋವು ಆಗ್ತಾ ಇದೆ ಹೇಳ್ತಿದ್ರು. ಅವರಿಗೆ ಲೂಸ್ ಮೋಷನ್ ಆಗಿತ್ತು. ರಾತ್ರಿ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದಿದ್ದರು. ಕಾಫಿ ಕುಡಿದು ಸ್ವಲ್ಪ ಎರಡು ಗಂಟೆ ನಿದ್ದೆ ಮಾಡ್ತಿನಿ ಅಂತ ನಿದ್ದೆ ಮಾಡಿದ್ದರು. ಬಳಿಕ ಎದ್ದೇಳಲಿಲ್ಲ ಬಳಿಕ ಹಾರ್ಟ್ ಅಟ್ಯಾಕ್ ಆಗಿತ್ತು” ಎಂದು ದ್ವಾರಕೀಶ್ ಪುತ್ರ ಯೋಗೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.