ಮಂಗಳೂರು:ಏಪ್ರಿಲ್ 15:ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಮಲ್ಲಿಪ್ಪಾಡಿ ರಸ್ತೆಯ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದಿದೆ. ಪರಿಣಾಮ ಘಟನೆಯಲ್ಲಿ ಏಳು ಜನರು ಗಾಯಗೊಂಡಿದ್ದಾರೆ. ಸೇತುವೆಯ ಕೊನೆಯ ಹಂತದ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸೇತುವೆಯ ಕೊನೆಯ ಹಂತದ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದಾಗ ಸೇತುವೆ ಕುಸಿದಿದ್ದು, ಈ ವೇಳೆ ಓರ್ವ ಕಾರ್ಮಿಕ ಸಿಲುಕಿದ್ದಾನೆ ಇನ್ನುಳಿದ ಉಳಿದ ಆರು ಮಂದಿಯನ್ನು ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ