ಮಣಿಪಾಲ, ಎಪ್ರಿಲ್ 13 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಸಂಸ್ಥೆಯು ಕ್ವಾಕ್ವರೆಲಿ ಸಿಮಾಂಡ್ಸ್ ಜಾಗತಿಕ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ [ರ‍್ಯಾಂಕಿಂಗ್) ದಲ್ಲಿ ಸ್ಥಾನ ಪಡೆದಿದ್ದು, ಜೀವವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ದಂತವೈದ್ಯಕೀಯ (ಡೆಂಟಿಸ್ಟ್ರಿ] ಮತ್ತು ಅಂಗರಚನಾಶಾಸ್ತ್ರ [ಅನಾಟಮಿ] ಮತ್ತು ಪಿಸಿಯಾಲಜಿ [ದೇಹಶಾಸ್ತ್ರ] ವಿಭಾಗಗಳಿಗೆ ಈ ಶ್ರೇಯಾಂಕ ಬಂದಿರುವುದು ಗಮನಾರ್ಹವಾಗಿದೆ.
ಲೈಫ್ ಸೈನ್ಸಸ್‌ನ ವಿಷಯದ ಶ್ರೇಯಾಂಕ ಮಟ್ಟವು ಗಣನೀಯವಾಗಿ ಹೆಚ್ಚಿದ್ದು ಪ್ರಸ್ತುತ 317 ನೆಯ ಸ್ಥಾನ ಪಡೆದಿದ್ದು ಕಳೆದ ವರ್ಷಕ್ಕಿಂತ 51 ರಷ್ಟು ಅಧಿಕ ಶ್ರೇಯಾಂಕ ಬಂದಿದೆ. ವೈದ್ಯಕೀಯ ವಿಭಾಗದಲ್ಲಿಯೂ ಶ್ರೇಯಾಂಕದ ಮಟ್ಟ ಹೆಚ್ಚಿದೆ.
ಜಗತ್ತಿನಾದ್ಯಂತ 150 ವಿಶ್ವವಿದ್ಯಾನಿಲಯಗಳು ಶ್ರೇಯಾಂಕವನ್ನು ಪಡೆದುಕೊಂಡಿದ್ದು ಅಂಗರಚನಾಶಾಸ್ತ್ರ [ಅನಾಟಮಿ] ಮತ್ತು ಶರೀರ ಶಾಸ್ತ್ರ [ಫಿಸಿಯಾಲಜಿ] ವಿಭಾಗಗಳಲ್ಲಿ ಭಾರತದಿಂದ ಕೇವಲ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಸಂಸ್ಥೆಯು ಮಾತ್ರ ಆಯ್ಕೆಯಾಗಿದೆ.
ದಂತ ವೈದ್ಯಕೀಯ ವಿಭಾಗದಲ್ಲಿ ಜಗತ್ತಿನಾದ್ಯಂತ 100 ವಿಶ್ವವಿದ್ಯಾನಿಲಯಗಳು ಶ್ರೇಯಾಂಕವನ್ನು ಪಡೆದಿದ್ದು ಅವುಗಳಲ್ಲಿ ಭಾರತದ ಕೇವಲ ಎರಡು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಶ್ರೇಯಾಂಕ ನೀಡಲಾಗಿದೆ. ಭಾರತದ ಎರಡು ವಿಶ್ವವಿದ್ಯಾನಿಲಯಗಳಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೆಯರ್ ಎಜುಕೇಶನ್ ಕೂಡ ಒಂದಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ 200 ಪಟ್ಟಿಗಳಲ್ಲಿ ಮೂರು ಕಿರಿದು ವಿಷಯಗಳು [ನ್ಯಾರೋ ಸಬ್ಜೆಕ್ಟ್ಸ್] ಸೇರಿಕೊಂಡಿವೆ. [ಅವುಗಳೆಂದರೆ, ದಂತ ವೆದ್ಯಕೀಯ, ಅಂಗರಚನಾಶಾಸ್ತ್ರ [ಅನಾಟಮಿ] & ಔಷಧ ವಿಜ್ಞಾನ [ಫಾರ್ಮಸಿ ಮತ್ತು ಫಾರ್ಮಕಾಲಜಿ]
ವಿವರ ಹೀಗಿವೆ
ಬೃಹತ್ ವಿಷಯ [ಬ್ರಾಡ್ ಸಬ್ಜೆಕ್ಟ್ಸ್]
2024
2023
ಜೀವ ವಿಜ್ಞಾನ ಮತ್ತು ವೆದ್ಯಕೀಯ [ಲೆಫ್ ಸಾಯನ್ಸಸ್ ಆಯಂಡ್ ಮೆಡಿಸಿನ್]
317
368
ಬೃಹತ್ ವಿಷಯ [ಬ್ರಾಡ್ ಸಬ್ಜೆಕ್ಟ್ಸ್]
ಕಿರಿದು ವಿಷಯ [ ನ್ಯಾರೋ ಸಬ್ಜೆಕ್ಟ್ಸ್]
2024
2023
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ [ಟೆಕ್ನಾಲಜಿ]
ಕಂಪ್ಯೂಟರ್ ಸಾಯನ್ಸ್ & ಇನ್‌ಫಾರ್ಮೇಶನ್ ಸಿಸ್ಟಮ್ಸ್
601-650
651-680
ಜೀವ ವಿಜ್ಞಾನ ಮತ್ತು ವೆದ್ಯಕೀಯ [ಲೈಫ್ ಸಾಯನ್ಸಸ್ ಆ್ಯಂಡ್ ಮೆಡಿಸಿನ್]
ದೇಹರಚನಾಶಾಸ್ತ್ರ ಮತ್ತು ಶರೀರ ಶಾಸ್ತ್ರ
[ಅನಾಟಮಿ & ಫಿಸಿಯಾಲಜಿ]
101-150
NA
ಜೀವಶಾಸ್ತ್ರೀಯ ವಿಜ್ಞಾನ
[ಬಯಾಲಜಿಕಲ್ ಸಾಯನ್ಸಸ್]
451-500
501-550
ದಂತ ವೈದ್ಯಕೀಯ [ಡೆಂಟಿಸ್ಟ್ರಿ]
51-100
NA
ವೈದ್ಯಕೀಯ [ಮೆಡಿಸಿನ್]
201-250
251-300
ಔಷಧ ವಿಜ್ಞಾನ ವಿಭಾಗಗಳು
[ಫಾರ್ಮಸಿ & ಫಾರ್ಮಕಾಲಜಿ]
151-200
101-150
ನಿಸರ್ಗ ವಿಜ್ಞಾನ
[ನ್ಯಾಚುರಲ್ ಸಾಯನ್ಸಸ್]
ರಸಾಯನ ಶಾಸ್ತ್ರ
[ಕೆಮಿಸ್ಟ್ರಿ]
601-650
601-630
ಕ್ವಾಕ್ವರೆಲಿ ಸಿಮಾಂಡ್ಸ್ ಜಾಗತಿಕ ವಿದ್ಯಾನಿಲಯ ಶ್ರೇಯಾಂಕದ 20 ನೆಯ ಆವೃತ್ತಿಯಲ್ಲಿ 104 ದೇಶಗಳಿಂದ 1,500 ಸಂಸ್ಥೆಗಳು ಭಾಗವಹಿಸಿದ್ದು ಈ ಪ್ರತಿಷ್ಣಿತ ಶ್ರೇಯಾಂಕ ಆವೃತ್ತಿಯಲ್ಲಿ ಉದ್ಯೋಗಶೀಲ ಯೋಜನೆ ಮತ್ತು ಸುಸ್ಥಿರತೆಗೆ ಒತ್ತು ನೀಡಲಾಗುತ್ತದೆ.