ಕುಂದಾಪುರ : ಏಪ್ರಿಲ್ 12 : ಕುಂದಾಪುರ ತಾಲೂಕಿನ ಹೆಂಗವಳ್ಳಿಯ ಶಂಕರನಾರಾಯಣದ ಖಾಸಗಿ ರೆಸಾರ್ಟ್‌ನಲ್ಲಿ ನಿನ್ನೆ(ಏ.11) ಮಧ್ಯಾಹ್ನ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿದ್ದಾನೆ.
ಮೃತಪಟ್ಟ ಬಾಲಕ ಮುಹಮ್ಮದ್ ಅರೀಝ್ (10) ಎಂದು ಗುರುತಿಸಲಾಗಿದೆ.ಈದ್ ಹಬ್ಬದ ರಜೆ ಪ್ರಯುಕ್ತ ಕುಟುಂಬದ ಜೊತೆಗೆ ಅಝೀಝ್ ತೆರಳಿದ್ದ ಎನ್ನಲಾಗಿದೆ
ಗುರುವಾರ ಮನೆ ಮಂದಿಯೊಂದಿಗೆ ಹೆಂಗವಳ್ಳಿಯ ಖಾಸಗಿ ರೆಸಾರ್ಟ್ ಸ್ವಿಮಿಂಗ್ ಫುಲ್ ನ ನೀರಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.
ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತ ಹೂಡೆಯ ದಾರುಸ್ಟಲಾಮ್ ಇಂಗ್ಲಿಷ್ ಮಿಡಿಯಂ ಶಾಲೆಯ ವಿದ್ಯಾರ್ಥಿಯಾಗಿದ್ದನು.